Monday, March 30, 2015

ಕೇಂದ್ರದಿಂದ ಬಾಲೆಯರಿಗೆ ಸುಕನ್ಯಾ ಸಮೃದ್ಧಿ ಖಾತೆ [PRAJAVANI]

ನವದೆಹಲಿ (ಪಿಟಿಐ): ಸಣ್ಣ ಉಳಿತಾಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ವಿಶೇಷ ಠೇವಣಿ ಯೋಜನೆ ‘ಸುಕನ್ಯಾ ಸಮೃದ್ಧಿ ಖಾತೆ’ಯನ್ನು ಗುರುವಾರ ಪರಿಚಯಿಸಿದೆ.
ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಯಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ 10 ವರ್ಷಗಳವರೆಗೆ ಖಾತೆ ತೆರೆಯ­ಬಹುದು. ಖಾತೆ ತೆರೆದು 21 ವರ್ಷಗಳ ಬಳಿಕ ಹಣ ಪಡೆಯ­ಬಹುದು. 14 ವರ್ಷಗಳ ವರೆಗೆ ಠೇವಣಿ ಇಡಬೇಕಾಗುತ್ತದೆ. ಠೇವಣಿ­ಯಲ್ಲಿ ಅರ್ಧದಷ್ಟು ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಬಳಸಬಹುದು.
ವಿಶೇಷ ಬಡ್ಡಿದರ
ಈ ಯೋಜನೆಗೆ ವಿಶೇಷ ಬಡ್ಡಿದರವನ್ನೂ ನೀಡುವುದಾಗಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಾದ್ಯಂತ ಯಾವ ಸ್ಥಳಕ್ಕೆ ಬೇಕಿದ್ದರೂ ಖಾತೆ ವರ್ಗಾವಣೆ ಮಾಡಬಹುದಾಗಿದೆ.

No comments:

Post a Comment