Monday, March 30, 2015

ಬೇಟಿ ಬಚಾವೊ ಬೇಟಿ ಪಡಾವೊ [KARNATAKA TIMES]

ಬೇಟಿ ಬಚಾವೊ ಬೇಟಿ ಪಡಾವೊ 

345
ಪಾಣಿಪತ್‌ : ಹೆಣ್ಣು ಭ್ರೂಣ­ಹತ್ಯೆ­ಯನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಖಂಡಿಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ತೋರುವ ತಾರತಮ್ಯದ ಧೋರಣೆ­ಯು ಜನರ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಇಲ್ಲಿ ಗುರುವಾರ ‘ಬೇಟಿ ಬಚಾವೊ ಬೇಟಿ ಪಡಾವೊ (ಹೆಣ್ಣು ಮಗು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಣ್ಣು ಭ್ರೂಣಹತ್ಯೆಗೆ ಪ್ರೋತ್ಸಾಹ ನೀಡುವ ವೈದ್ಯರನ್ನು ತರಾಟೆಗೆ ತೆಗೆದು­ಕೊಂಡ ಪ್ರಧಾನಿ ಮೋದಿ, ವೈದ್ಯರು ಇಂತಹ ಪಾಪ ಕೃತ್ಯ ಮಾಡುವ ಮೂಲಕ ಸಮಾಜಕ್ಕೆ ದ್ರೋಹ ಬಗೆಯು­ತ್ತಿದ್ದಾರೆ ಎಂದರು.
‘ಇನ್ನು ಮುಂದೆ ಹೆಣ್ಣು ಭ್ರೂಣಹತ್ಯೆ ಮಾಡುವುದಿಲ್ಲ ಮತ್ತು ಹೆಣ್ಣು ಮಕ್ಕಳ ಬಗ್ಗೆ ತಾರತಮ್ಯ ಮಾಡುವುದಿಲ್ಲ’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ಪ್ರಧಾನಿ ಪ್ರತಿಜ್ಞಾವಿಧಿ ಭೋದಿಸಿದರು. ಹರಿಯಾಣವನ್ನು ಉಲ್ಲೇಖಿ­ಸಿದ ಮೋದಿ, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಭಾರತದ ಮೊದಲ ಮಹಿಳೆ ಕಲ್ಪನಾ ಚಾವ್ಲಾ ಹರಿ­ಯಾಣ­ದವರು. ಇಂತಹ ಮತ್ತಷ್ಟು ಕಲ್ಪನಾ ಚಾವ್ಲಾ­ರನ್ನು ಭ್ರೂಣ­ದಲ್ಲೇ ಹತ್ಯೆ ಮಾಡ­ಲಾಗುತ್ತಿ­ರುವುದು ನೋವಿನ ಸಂಗತಿ’ ಎಂದರು.
ಸುಕನ್ಯಾ ಸಮೃದ್ಧಿ ಯೋಜನೆ: ಪ್ರಧಾನಿ ಮೋದಿ ಇದೇ ವೇಳೆ ‘ಸುಕನ್ಯಾ ಸಮೃದ್ಧಿ ಯೋಜನೆ (ಹೆಣ್ಣು ಮಕ್ಕಳ ಅಭಿ­ವೃದ್ಧಿ ಯೋಜನೆ)’ಗೆ ಚಾಲನೆ ನೀಡಿದರು. ಈ ಯೋಜನೆಯಡಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸ­ರಲ್ಲಿ ಬ್ಯಾಂಕ್ ಖಾತೆ ತೆರೆದರೆ ಆ ಖಾತೆಗೆ ಹೆಚ್ಚು ಬಡ್ಡಿ (ಶೇ 9.1) ಮತ್ತು ಆದಾಯ ತೆರಿಗೆ ರಿಯಾಯಿತಿ ನೀಡಲಾ­ಗುತ್ತದೆ. ಅಂಚೆ ಕಚೇರಿ ಮತ್ತು ವಾಣಿಜ್ಯ ಬ್ಯಾಂಕ್‌­ಗಳ ಅಧಿಕೃತ ಶಾಖೆಗಳಲ್ಲಿ ಕನಿಷ್ಠ ₨1000ದಿಂದ ಗರಿಷ್ಠ ₨1.5 ಲಕ್ಷ ಠೇವಣಿ­ಯಿಟ್ಟು ಈ ಖಾತೆ ಆರಂಭಿಸಬಹುದು.

No comments:

Post a Comment