ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ
ಉದಯವಾಣಿ, Feb 09, 2015, 3:40 AM IST

image: http://www.udayavani.com/sites/default/files/images/go.png

ಮೋದಿ ಸರಕಾರದ ಆಶೋತ್ತರಗಳಲ್ಲಿ ಒಂದಾದ "ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯ ಅಂಗವಾಗಿ ಇದೀಗ ಕೇಂದ್ರ ಸರಕಾರವು ಮೈನರ್ ಹೆಣ್ಣುಮಕ್ಕಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ "ಸುಕನ್ಯಾ ಸಮೃದ್ಧಿ' ಯೋಜನೆಯನ್ನು 2 ಡಿಸೆಂಬರ್ 2014ರಂದು ಬಿಡುಗಡೆ ಮಾಡಿದೆ. ಇದರ ವಿದ್ಯುಕ್ತ ಅನಾವರಣ ಜ. 21ರಂದು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಇದೊಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಇದರ ಖಾತೆಗಳನ್ನು ತೆರೆಯಬಹುದಾಗಿದೆ. ಈ ಖಾತೆಯನ್ನು ಹೆತ್ತವರು ಅಥವಾ ರಕ್ಷಕರು ತೆರೆಯಬಹುದಾಗಿದೆ. ಹೆತ್ತವರು/ರಕ್ಷಕರು ಕೇವಲ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದಾಗಿದೆ. ಆದರೆ ಅವಳಿ/ತ್ರಿವಳಿ ಹೆರಿಗೆಯಾಗಿದ್ದಲ್ಲಿ ಮೂರನೆಯ ಹೆಣ್ಣು ಮಗುವಿಗೂ ಖಾತೆ ತೆರೆಯಬಹುದು. ಒಂದು ಹೆಣ್ಣು ಮಗುವಿನ ಮೇಲೆ ದೇಶದಾದ್ಯಂತ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ.
ವಯೋ ಮಿತಿ: ಖಾತೆ ತೆರೆಯುವಾಗ ಹೆಣ್ಣು ಮಗುವಿಗೆ 10 ವರ್ಷ ವಯಸ್ಸು ಮೀರಿರಬಾರದು. ಆದರೆ ಸ್ಕೀಮು ಆರಂಭದ (2-12-2014) ಹಿಂದಿನ 1 ವರ್ಷದಲ್ಲಿ 10 ತುಂಬಿದವರಿಗೂ ಒಂದು ವಿಶೇಷ ರಿಯಾಯಿತಿಯಾಗಿ ಈ ಖಾತೆಯನ್ನು ತೆರೆಯುವ ಅನುಮತಿ ನೀಡಲಾಗಿದೆ (ಅಂದರೆ 2 ಡಿಸೆಂಬರ್ 2013ರಿಂದ 1 ಡಿಸೆಂಬರ್ 2014ರಲ್ಲಿ 10 ತುಂಬಿದವರು).
ವಯೋ ಮಿತಿ: ಖಾತೆ ತೆರೆಯುವಾಗ ಹೆಣ್ಣು ಮಗುವಿಗೆ 10 ವರ್ಷ ವಯಸ್ಸು ಮೀರಿರಬಾರದು. ಆದರೆ ಸ್ಕೀಮು ಆರಂಭದ (2-12-2014) ಹಿಂದಿನ 1 ವರ್ಷದಲ್ಲಿ 10 ತುಂಬಿದವರಿಗೂ ಒಂದು ವಿಶೇಷ ರಿಯಾಯಿತಿಯಾಗಿ ಈ ಖಾತೆಯನ್ನು ತೆರೆಯುವ ಅನುಮತಿ ನೀಡಲಾಗಿದೆ (ಅಂದರೆ 2 ಡಿಸೆಂಬರ್ 2013ರಿಂದ 1 ಡಿಸೆಂಬರ್ 2014ರಲ್ಲಿ 10 ತುಂಬಿದವರು).
ಖಾತೆ ಚಲಾವಣೆ: ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ಅನಂತರ ಹೆಣ್ಣು ಮಗು ಸ್ವತಃ ಚಲಾಯಿಸ ಬಹುದಾಗಿದೆ. ಇದಕ್ಕಾಗಿ ಒಂದು ಪಾಸ್ ಬುಕ್ ನೀಡಲಾಗುತ್ತದೆ.
ಖಾತೆಯ ಅವಧಿ: ಈ ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷಗಳವರೆಗೆ. ಆ ಮೊದಲೇ ಹೆಣ್ಣುಮಗುವಿಗೆ ಮದುವೆಯಾದರೆ ಖಾತೆ ಅಲ್ಲಿಗೇ ಅಂತ್ಯವಾಗುತ್ತದೆ. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 14 ವರ್ಷಗಳು ಮಾತ್ರ. ಕಂತು: ಕನಿಷ್ಠ ರೂ. 1,000ದೊಂದಿಗೆ ಈ ಖಾತೆಯ ಆರಂಭ ಮಾಡಬಹುದು. ಆ ಬಳಿಕ ವಾರ್ಷಿಕ ಕನಿಷ್ಠ ರೂ. 100 ಅಥವಾ ಗರಿಷ್ಠ ರೂ. 1,50,000ವನ್ನು ಈ ಖಾತೆಗೆ ಕಟ್ಟಬಹುದು. ಕನಿಷ್ಠ ಪಾವತಿಯನ್ನು ಮಾಡದ ವರ್ಷ ರೂ. 50 ದಂಡ ತಗಲುತ್ತದೆ.
ಬಡ್ಡಿ ದರ: ಅಂಚೆಯ ಸಣ್ಣ ಉಳಿತಾಯದಲ್ಲಿ ಪ್ರತಿ ವರ್ಷವೂ ಬಡ್ಡಿ ದರಗಳನ್ನು ಪೂರ್ವಭಾವಿಯಾಗಿ ಘೋಷಿಸುವ ಕಾನೂನು ಬಂದಿದೆ. ಹಾಗೆಯೇ ಈ ಸ್ಕೀಮಿನ ಬಡ್ಡಿ ದರವೂ ಪ್ರತಿ ವರ್ಷ ಬದಲಾಗುತ್ತದೆ. ಸದ್ಯಕ್ಕೆ ಅನ್ವಯವಾಗುವಂತೆ (ವಿತ್ತೀಯ ವರ್ಷ 2014-15) ಘೋಷಿತವಾದ ಬಡಿª ದರ 9.1%. ಇದು ಪಿಪಿಎಫ್ (8.7%) 10-ವರ್ಷದ ಎನ್‌ಎಸ್‌ಸಿ (8.8%) ಹಾಗೂ ಎಮ್‌ಐಎಸ್ (8.4%) ಗಳಿಗಿಂತ ಜಾಸ್ತಿ. ಸೀನಿಯರ್ ಸಿಟಿಜನ್ ಸ್ಕೀಮಿನಲ್ಲಿ ಮಾತ್ರ ಅಂಚೆ ಇಲಾಖೆ 9.2% ಬಡ್ಡಿ ದರ ನೀಡುತ್ತದೆ. 9.1% ಬಡ್ಡಿದರವು ಇಲ್ಲಿ ವಾರ್ಷಿಕವಾಗಿ ಚಕ್ರೀಕೃತಗೊಳ್ಳುತ್ತದೆ. ಬಡ್ಡಿಯನ್ನು ಪಿಪಿಎಫ್ ಖಾತೆಯ ಮಾದರಿಯಲ್ಲಿಯೇ ಲೆಕ್ಕ ಹಾಕಲಾಗುತ್ತದೆ. ಪಕ್ಕದಲ್ಲಿ ನೀಡಲಾದ ಟೇಬಲ್‌ನಲ್ಲಿ ಮಾಸಿಕ ರೂ. 1,000 ಕಂತು ಕಟ್ಟುವಲ್ಲಿ 21 ವರ್ಷಗಳ ಬಡ್ಡಿ ಮತ್ತು ವರ್ಷಾಂತ್ಯದ ಮೊತ್ತಗಳನ್ನು ನೀಡಲಾಗಿದೆ.
ಅವಧಿಪೂರ್ವ ಹಿಂಪಡೆತ/ಸಾಲ: ಪಿಪಿಎಫ್ ಖಾತೆಯಂತೆಯೇ ಇಲ್ಲೂ ಅವಧಿಪೂರ್ವ ಹಿಂಪಡೆತ ಮಾಡಬಹುದಾಗಿದೆ. ಖಾತೆದಾರಳ ಉಚ್ಚ ಶಿಕ್ಷಣದ ಸಂದರ್ಭದಲ್ಲಿ ಅಥವಾ ಮದುವೆಯ ನಿಮಿತ್ತ ಖಾತೆಯಲ್ಲಿ ಹಿಂದಿನ ವರ್ಷಾಂತ್ಯದಲ್ಲಿದ್ದ ಮೊತ್ತದ 50% ಭಾಗವನ್ನು ಹಿಂಪಡೆಯಬಹುದಾಗಿದೆ. ಆದರೆ ಇದಕ್ಕಾಗಿ ಅವಳಿಗೆ 18 ತುಂಬಿರಬೇಕಾದುದು ಅವಶ್ಯ. ಇದರಲ್ಲಿ ಪಿಪಿಎಫ್ನಂತೆ ಸಾಲ ಸೌಲಭ್ಯ ಇಲ್ಲ.
ಕರ ವಿನಾಯಿತಿ: ಈ ಯೋಜನೆಗೆ ಸೆಕ್ಷನ್ 80 ಸಿ ಅಡಿಯಲ್ಲಿ ಕರವಿನಾಯಿತಿಯನ್ನು ಘೋಷಿಸಲಾಗಿದೆ. ಅಂದರೆ ಪಿಪಿಎಫ್, ವಿಮೆ, 5-ವರ್ಷದ ಬ್ಯಾಂಕ್ ಎಫ್ಡಿ, ಎನ್‌ಎಸ್‌ಸಿ ಇತ್ಯಾದಿ ಯೋಜನೆಗಳ ಒಟ್ಟಾರೆ ಮಿತಿ ರೂ. 1,50,000ದ ಒಳಗೆ ಇದನ್ನೂ ಸೇರಿಸಿಕೊಳ್ಳಲಾಗಿದೆ.
ಆದರೆ ಇದರಿಂದ ಬರುವ ಬಡ್ಡಿಯ ಮೇಲೆ ಯಾವುದೇ ಕರ ವಿನಾಯಿತಿ ಇರುವುದಿಲ್ಲ. ಮೈನರ್ ಇರುವಷ್ಟು ಕಾಲ ಈ ಬಡ್ಡಿಯನ್ನು ಹೆತ್ತವರ/ರಕ್ಷಕರ ಆದಾಯಕ್ಕೆ ಸೇರಿಸಿ ಕರ ಕಟ್ಟ ಬೇಕು. ಆ ಬಳಿಕ ಅದು ಅವಳ ಪಾಲಿಗೆ ಬರುತ್ತದೆ.
ಆದರೆ ಇದರಿಂದ ಬರುವ ಬಡ್ಡಿಯ ಮೇಲೆ ಯಾವುದೇ ಕರ ವಿನಾಯಿತಿ ಇರುವುದಿಲ್ಲ. ಮೈನರ್ ಇರುವಷ್ಟು ಕಾಲ ಈ ಬಡ್ಡಿಯನ್ನು ಹೆತ್ತವರ/ರಕ್ಷಕರ ಆದಾಯಕ್ಕೆ ಸೇರಿಸಿ ಕರ ಕಟ್ಟ ಬೇಕು. ಆ ಬಳಿಕ ಅದು ಅವಳ ಪಾಲಿಗೆ ಬರುತ್ತದೆ.
ವಿಶ್ಲೇಷಣೆ: ಇದು ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುವಂತಹ ಒಂದು ಯೋಜನೆ. ಅವಧಿಯ ದೃಷ್ಟಿಯಿಂದಲೂ ದೀರ್ಘಕಾಲಕ್ಕೆ ಧನ ಸಂಚಯ ಮಾಡುವಂತಹ ಯೋಜನೆ. ಬಡ್ಡಿ ದರವೂ ಉತ್ತಮವಾಗಿದೆ. ಪಿಪಿಎಫ್ ಖಾತೆಗಿಂತಲೂ ಜಾಸ್ತಿ ಬಡ್ಡಿ ನೀಡುವುದು ಇದರ ವಿಶೇಷತೆ. ವಾರ್ಷಿಕ 9.1% ಬಡ್ಡಿ ಇನ್ನಾವ ಸಾಧಾರಣ ಖಾತೆಗಳಲ್ಲೂ ಲಭ್ಯವಿಲ್ಲ (ಸೀನಿಯರ್ ಸಿಟಿಜನ್ ಖಾತೆಯಲ್ಲಿ ಮಾತ್ರ 9.2% ದೊರಕುತ್ತದೆ). ಈ ನಿಟ್ಟಿನಲ್ಲಿ ಸರಕಾರ ಉತ್ತಮ ಯೋಜನೆಯನ್ನೇ ಹಾಕಿಕೊಂಡಿದೆ. ಆದರೆ ಕರವಿನಾಯಿತಿಯ ಕ್ಷೇತ್ರದಲ್ಲಿ ಈ ಯೋಜನೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಕೇವಲ ಸೆಕ್ಷನ್ 80ಸಿ ಅಡಿಯಲ್ಲಿ ಮಾತ್ರ ಕರ ವಿನಾಯಿತಿ ಸೌಲಭ್ಯವನ್ನು ನೀಡಲಾಗಿದೆ- ಅಂದರೆ ವಾರ್ಷಿಕವಾಗಿ ಹೂಡುವ ಮೊತ್ತದಲ್ಲಿ ಮಾತ್ರ ರೂ. 1,50,000 ಮಿತಿಯೊಳಗೆ ಕರವಿನಾಯಿತಿ ದೊರಕುತ್ತದೆ. ಆದರೆ ಇದರ ಮೇಲೆ ಬರುವ ಬಡ್ಡಿಯ ಮೇಲೆ ಕರ ನೀಡಬೇಕಾಗುತ್ತದೆ. ಪಿಪಿಎಫ್ ಮತ್ತು ಇಎಲ್‌ಎಸ್‌ಎಸ್ ಸ್ಕೀಮುಗಳನ್ನು ನೋಡಿದರೆ ಅವುಗಳಲ್ಲಿ ಬರುವ ಬಡ್ಡಿಯ ಮೇಲೂ ಕರವಿನಾಯಿತಿ ಇರುತ್ತದೆ. ಕರ ಪಾವತಿ ಮಾಡುವವರಿಗೆ ಈ ನಿಟ್ಟಿನಲ್ಲಿ ಈ ಯೋಜನೆ ಪಿಪಿಎಫ್ ಮತ್ತು ಇಎಲ್‌ಎಸ್‌ಎಸ್ ಯೋಜನೆಗಳಿಗಿಂತ ಖಂಡಿತವಾಗಿಯೂ ಕಳಪೆಯಾಗಿ ಕಂಡೀತು. ಆದರೆ ಕರ ಅನ್ವಯವಾಗದವರಿಗೆ ಈ ಸ್ಕೀಮು ಅವುಗಳಿಗಿಂತ ಉತ್ತಮವಾದೀತು.
ಈ ಬಜೆಟ್ಟಿನಲ್ಲಿ ಈ ಸ್ಕೀಮಿನ ಮೇಲೆ ಬಡ್ಡಿ ದರದಲ್ಲೂ ಕರ ವಿನಾಯಿತಿ ನೀಡಬಹುದು ಎಂಬ ಊಹಾಪೋಹ ಚಾಲ್ತಿಯಲ್ಲಿದೆ. ಹಾಗಾಗಲಿ ಎಂದು ಆಶಿಸೋಣ. ಆದರೆ ಅಂತಹ ಗಾಳಿಸುದ್ದಿಗಳು ಸಾಕಾರವಾದ ಬಳಿಕವಷ್ಟೆ ನಾವು ಹೂಡಿಕೆಯ ಬಗ್ಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಪ್ರಚಾರ: ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಆರಂಭಗೊಂಡ ಈ ಯೋಜನೆಯ ಬಗ್ಗೆ ಈಗಿನ್ನೂ ಯಾವುದೇ ಪ್ರಚಾರ ಆರಂಭವಾಗಿಲ್ಲ. ಸ್ಕೀಮು ಅರಂಭಗೊಂಡ ಬಳಿಕ ಸಂಪೂರ್ಣ ಅನುಷ್ಠಾನಕ್ಕೆ ಸಮಯ ತಗಲುತ್ತದೆ. ನಿಮ್ಮ ಭಾರತೀಯ ಅಂಚೆ ಇಲಾಖೆಯ ಜಾಲತಾಣದಲ್ಲಿ ಇದರ ಬಗ್ಗೆ ಉÇÉೇಖವೂ ಇಲ್ಲ. ಹಾಗಾಗಿ ನಿಮ್ಮ ಜಿÇÉೆಯ ಅಂಚೆ ಕಚೇರಿ ಅಥವಾ ಸರಕಾರಿ ಬ್ಯಾಂಕುಗಳ ಶಾಖೆಯಲ್ಲಿ ಈ ಬಗ್ಗೆ ಮಾಹಿತಿ ಇನ್ನೂ ಬಂದಿರಲಾರದು. ತಾಳ್ಮೆ ಇರಲಿ.
No comments:
Post a Comment