Thursday, November 5, 2015

ಚಿನ್ನದ ಬಾಂಡ್‌; ನ.5ರಿಂದ ಅರ್ಜಿ ಸ್ವೀಕಾರ,26ಕ್ಕೆ ವಿತರಣೆ


ಚಿನ್ನದ ಬಾಂಡ್‌; ನ.5ರಿಂದ ಅರ್ಜಿ ಸ್ವೀಕಾರ,26ಕ್ಕೆ ವಿತರಣೆ


  • ನ. 5ರಿಂದ 20ರ ವರೆಗೆ ಚಿನ್ನದ ಬಾಂಡ್‌ಗಾಗಿ ಅಂಚೆ ಕಚೇರಿ ಶಾಖೆಗಳಲ್ಲಿ ನಾಗರಿಕರು ಅರ್ಜಿ ಸಲ್ಲಿಸಬಹುದು
  • ನ. 26ರಂದು ಬಾಂಡ್‌ ವಿತರಿಸ ಲಾಗುತ್ತದೆ
  • ಬಾಂಡ್‌ನ‌ಲ್ಲಿ ತೊಡಗಿ ಸುವ ಹಣಕ್ಕೆ ಶೇ. 2.75ರಷ್ಟು ಬಡ್ಡಿ ನೀಡಲಾಗುತ್ತದೆ
  • ಬಡ್ಡಿ ಮೊತ್ತವನ್ನು 6 ತಿಂಗಳಿಗೊಮ್ಮೆ ಪಾವತಿ ಮಾಡ ಲಾಗುತ್ತದೆ.
  • ಬಾಂಡ್‌ ಹಿಂದಿರುಗಿ ಸುವಾಗ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿರುತ್ತದೋ ಅಷ್ಟು ಹಣ ನೀಡಲಾಗುತ್ತದೆ.
  • 2 ಗ್ರಾಂನಿಂದ 500 ಗ್ರಾಂ ವರೆಗಿನ ಚಿನ್ನವನ್ನು ಬಾಂಡ್‌ ಮೂಲಕ ಖರೀದಿಸಬಹುದು
  • ಎಂಟು ವರ್ಷ ಗಳ ಬಾಂಡ್‌ ಇದಾಗಿದೆಯಾದರೂ, ಐದನೇ ವರ್ಷದಿಂದ ಬಾಂಡ್‌ ಮರ ಳಿಸಿ ಹಣ ಪಡೆಯಬಹುದಾಗಿದೆ. 
ಲಾಭವೇನು?ಭೌತಿಕ ಚಿನ್ನ ಖರೀದಿಸಿದರೆ ಅದನ್ನು ಭದ್ರವಾಗಿಡಲು ಬ್ಯಾಂಕಿನ ಲಾಕರ್‌ನಲ್ಲಿಡಬೇಕಾಗುತ್ತದೆ. ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಅದರ ಬದಲು ಬಾಂಡ್‌ ಖರೀದಿಸಿದರೆ ಬಡ್ಡಿ ಸಿಗುವುದರ ಜತೆಗೆ, ಚಿನ್ನದ ಮೌಲ್ಯವೂ ಬೆಳೆಯುತ್ತದೆ. ಅವಧಿ ಮುಗಿದ ಬಳಿಕ ಬಾಂಡ್‌ ಮರಳಿಸಿ, ಭೌತಿಕ ಚಿನ್ನವನ್ನೇ ಖರೀದಿಸಬಹುದು.



ಚಿನ್ನದ ಬಾಂಡ್‌; ನ.5ರಿಂದ ಅರ್ಜಿ ಸ್ವೀಕಾರ,26ಕ್ಕೆ ವಿತರಣೆ

ಉದಯವಾಣಿ, Oct 31, 2015, 3:45 AM IST
ಹೊಸದಿಲ್ಲಿ: ಚಿನ್ನದ ಮೇಲೆ ಅತಿಯಾದ ವ್ಯಾಮೋಹ ಹೊಂದಿರುವ ಭಾರತೀಯರಿಗೆ ಪರ್ಯಾಯ ಆಯ್ಕೆ ಒದಗಿಸುವ ಮೂಲಕ ಭೌತಿಕ ಚಿನ್ನ ಖರೀದಿ ಮೇಲಿನ ಆಕರ್ಷಣೆ ತಗ್ಗಿಸಲು ಕೇಂದ್ರ ಸರಕಾರ ಕೊನೆಗೂ  "ಚಿನ್ನದ ಬಾಂಡ್‌' ಯೋಜನೆ ಅನುಷ್ಠಾನಗೊಳಿಸಿದೆ.
ನ. 5ರಿಂದ 20ರ ವರೆಗೆ ಚಿನ್ನದ ಬಾಂಡ್‌ಗಾಗಿ ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಶಾಖೆಗಳಲ್ಲಿ ನಾಗ ರಿಕರು ಅರ್ಜಿ ಸಲ್ಲಿಸಬಹುದು. ನ. 26ರಂದು ಬಾಂಡ್‌ ವಿತರಿಸ ಲಾಗುತ್ತದೆ. ಬಾಂಡ್‌ನ‌ಲ್ಲಿ ತೊಡಗಿ ಸುವ ಹಣಕ್ಕೆ ಶೇ. 2.75ರಷ್ಟು ಬಡ್ಡಿ ನೀಡಲಾಗುತ್ತದೆ. ಬಡ್ಡಿ ಮೊತ್ತವನ್ನು 6 ತಿಂಗಳಿಗೊಮ್ಮೆ ಪಾವತಿ ಮಾಡ ಲಾಗುತ್ತದೆ. ಬಾಂಡ್‌ ಹಿಂದಿರುಗಿ ಸುವಾಗ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿರುತ್ತದೋ ಅಷ್ಟು ಹಣ ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಪ್ರಕಟನೆ ತಿಳಿಸಿದೆ.
2 ಗ್ರಾಂನಿಂದ 500 ಗ್ರಾಂ ವರೆಗಿನ ಚಿನ್ನವನ್ನು ಬಾಂಡ್‌ ಮೂಲಕ ಖರೀ ದಿಸಬಹುದು. ಹಿಂದಿನ ವಾರದ ಸರಾಸರಿ ಚಿನ್ನದ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಬಾಂಡ್‌ ವಿತರಿಸಲಾಗುತ್ತದೆ. ಎಂಟು ವರ್ಷ ಗಳ ಬಾಂಡ್‌ ಇದಾಗಿದೆಯಾದರೂ, ಐದನೇ ವರ್ಷದಿಂದ ಬಾಂಡ್‌ ಮರ ಳಿಸಿ ಹಣ ಪಡೆಯಬಹುದಾಗಿದೆ. 
ಬಾಂಡ್‌ ಮರಳಿಸಿದ ಸಂದರ್ಭ ದಲ್ಲಿ ಅದರ ಹಿಂದಿನ ವಾರದ ಚಿನ್ನದ ಸರಾಸರಿ ಬೆಲೆ ಎಷ್ಟಿರುತ್ತದೆಯೋ ಅಷ್ಟು ಮೊತ್ತವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಉದಾಹರಣೆಗೆ ಚಿನ್ನದ ಬಾಂಡ್‌ ಖರೀದಿಸಿದಾಗ 10 ಗ್ರಾಂನ ಬೆಲೆ 25 ಸಾವಿರ ರೂ. ಇದ್ದು, 8 ವರ್ಷಗಳ ಬಳಿಕ ಬಾಂಡ್‌ ಮರಳಿಸಿದಾಗ 50 ಸಾವಿರ ರೂ. ಆಗಿದ್ದರೆ ಅಷ್ಟು ಮೊತ್ತವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅದನ್ನು ಬಳಸಿಕೊಂಡು ಗ್ರಾಹಕರು ಭೌತಿಕ ಚಿನ್ನ ಖರೀದಿಸಬಹುದು.
ಬಾಂಡ್‌ನ‌ಲ್ಲಿ ಹೂಡಿಕೆ ಮಾಡಲಾಗುವ ಮೂಲ ಹಣಕ್ಕೆ ಶೇ.2.75ರಷ್ಟು ಬಡ್ಡಿಯನ್ನೂ ನೀಡಲಾಗುತ್ತದೆ. ಈ ಬಡ್ಡಿ ಮೊತ್ತ ತೆರಿಗೆ ವ್ಯಾಪ್ತಿಗೆ ಬರುತ್ತದೆ. ನ.5ರಿಂದ 20ರವರೆಗೆ ಮೊದಲ ಸುತ್ತಿನ ಅರ್ಜಿ ಕರೆಯಲಾಗಿದೆ. ಮತ್ತೂಂದು ಕಂತಿನ ಅರ್ಜಿ ಸ್ವೀಕಾರವನ್ನು ಮುಂದೆ ಪ್ರಕಟಿಸಲಾಗುತ್ತದೆ. ಚಿನ್ನದ ಬಾಂಡ್‌ ಅನ್ನು ಸಾಲ ಪಡೆಯಲು ಖಾತ್ರಿಯಾಗಿ ಬಳಸಿಕೊಳ್ಳಬಹುದು. 
ಏಕೆ ಈ ಯೋಜನೆ?: ಭೌತಿಕ ಚಿನ್ನದ ಮೇಲೆ ಭಾರತೀಯರ ಹೂಡಿಕೆ ಹೆಚ್ಚಾದ್ದರಿಂದ ಚಿನ್ನದ ಆಮದು ಹೆಚ್ಚಳವಾಗಿ ಚಾಲ್ತಿ ಖಾತೆಯಲ್ಲಿ ಭಾರೀ ಕೊರತೆ ಉಂಟಾಗಿತ್ತು. ಇದು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಭೌತಿಕ ಚಿನ್ನ ಖರೀದಿಯಿಂದ ಜನರನ್ನು ವಿಮುಖಗೊಳಿಸಲು ಚಿನ್ನದ ಬಾಂಡ್‌ ಬಿಡುಗಡೆ ಮಾಡುವುದಾಗಿ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್‌ ಜೇಟಿÉ ಘೋಷಿಸಿದ್ದರು. 
ಈ ಯೋಜನೆಯನ್ನು ದೀಪಾವಳಿಗೂ ಮುನ್ನವೇ ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ರವಿವಾರ  "ಮನ್‌ ಕೀ ಬಾತ್‌' ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದರು. 
ಲಾಭವೇನು?
ಭೌತಿಕ ಚಿನ್ನ ಖರೀದಿಸಿದರೆ ಅದನ್ನು ಭದ್ರವಾಗಿಡಲು ಬ್ಯಾಂಕಿನ ಲಾಕರ್‌ನಲ್ಲಿಡಬೇಕಾಗುತ್ತದೆ. ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಅದರ ಬದಲು ಬಾಂಡ್‌ ಖರೀದಿಸಿದರೆ ಬಡ್ಡಿ ಸಿಗುವುದರ ಜತೆಗೆ, ಚಿನ್ನದ ಮೌಲ್ಯವೂ ಬೆಳೆಯುತ್ತದೆ. ಅವಧಿ ಮುಗಿದ ಬಳಿಕ ಬಾಂಡ್‌ ಮರಳಿಸಿ, ಭೌತಿಕ ಚಿನ್ನವನ್ನೇ ಖರೀದಿಸಬಹುದು.

Monday, March 30, 2015

ಬೇಟಿ ಪಢಾವೋ; ಬೇಟಿ ಬಚಾವೋ ಆಂದೋಲನಕ್ಕೆ ಚಾಲನೆ [KANNADA PRABHA]

ಕನ್ನಡಪ್ರಭ


ಹೆಣ್ಣು ಮಕ್ಕಳ ರಕ್ಷಣೆಗೆ ಭಿಕ್ಷೆ ಬೇಡಿದ ಪ್ರಧಾನಿ!

ಬೇಟಿ ಪಢಾವೋ; ಬೇಟಿ ಬಚಾವೋ ಆಂದೋಲನಕ್ಕೆ ಚಾಲನೆ
Prime Minister Narendra Modi at the Beti Bachao Beti-Padhao programme in Panipat (PC: PTI)
`ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನಕ್ಕೆ ಚಾಲನೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ (ಕೃಪೆ : ಪಿಟಿಐ)
ನವದೆಹಲಿ: ಹೆಣ್ಣು ಮಕ್ಕಳ ಜೀವವನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಿ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿಯಾಗಿ ನಾನು ನಿಮ್ಮ ಮುಂದೆ  ಭಿಕ್ಷೆ ಬೇಡುತ್ತಿದ್ದೇನೆ.
ಇದು ಹರ್ಯಾಣ ದ ಪಾಣಿಪತ್‍ನಲ್ಲಿ `ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಿದ ಮಾತು.
ಹೆಣ್ಣು ಭ್ರೂಣ ಹತ್ಯೆ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು.
ನಾವೀಗ 21ನೇ ಶತಮಾನದಲ್ಲಿದ್ದೇವೆ ಎಂದು ಹೇಳಲೇ ನಾಚಿಕೆಯಾಗುತ್ತದೆ. ಹೆಣ್ಣು ಶಿಶುವನ್ನು ಭ್ರೂಣದಲ್ಲೇ ಕೊಲ್ಲುವ ಮೂಲಕ 18ನೇ ಶತಮಾನದಲ್ಲಿರುವಂತೆ
ಕಾಣುತ್ತಿದ್ದೇವೆ. ನೆನಪಿರಲಿ ಹೆಣ್ಣು ಮಕ್ಕಳೇ ಗಂಡು ಮಕ್ಕಳಿಗಿಂತ ಹೆಚ್ಚು ಪ್ರತಿಭಾನ್ವಿತರು. ನಿಮಗೆ ಸಾಕ್ಷಿ ಬೇಕಿದ್ದರೆ, ಅವರ ಪರೀಕ್ಷೆಯ ಫಲಿತಾಂಶವನ್ನೇ ಗಮನಿಸಿ.
ಜನ ತಮ್ಮ ಸೊಸೆ ಹೆಚ್ಚು ಓದಿರಬೇಕು ಎಂದು ಬಯಸುತ್ತಾರೆ. ಆದರೆ, ತಮ್ಮ ಮಗಳನ್ನೇಕೆ ಓದಿಸುವುದಿಲ್ಲ ಎಂದೂ ಪ್ರಶ್ನಿಸಿದರು.
ಹರಿಯಾಣದ ಸಮೀಪದಲ್ಲಿ ಕೊಳವೆ ಬಾವಿಗೆ ಪ್ರಿನ್ಸ್ ಎಂಬ ಬಾಲಕ ಬಿದ್ದಾಗ ಟಿವಿ ಮುಂದೆ ಕುಳಿತು ಕೋಟ್ಯಂತರ ಮಂದಿ ಪ್ರಾರ್ಥನೆ ಮಾಡುತ್ತೀರಿ. ಆದರೆ, ಪ್ರತಿದಿನ
ಸಾವಿರಾರು ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ. ಈ ಬಗ್ಗೆ ಯಾರಾದರೂ  ಯೋಚಿಸಿದ್ದೀರಾ ಎಂದು ಕೇಳಿದರು.


ಹೆಣ್ಣುಮಕ್ಕಳಿಗೆ `ಸುಕನ್ಯಾ ಸಮೃದ್ಧಿ '

ಆಂದೋಲನದ ಉತ್ತೇಜನಕ್ಕಾಗಿ ಪ್ರಧಾನಿ ಮೋದಿ ಅವರು ಸಣ್ಣ ಹೂಡಿಕೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ಶೇ. 9.1 ಬಡ್ಡಿ ನೀಡುವುದರ ಜತೆಗೆ ತೆರಿಗೆ ವಿನಾಯಿತಿಯನ್ನು ಪಡೆಯುವ ಸೌಲಭ್ಯ ನೀಡಲಾಗಿದೆ. ಇದಕ್ಕೆ `ಸುಕನ್ಯಾ ಸಮೃದ್ಧಿ ಖಾತೆ' ಎಂದು ಹೆಸರಿಡಲಾಗಿದೆ. ಹೆಣ್ಣು ಮಗು ಹುಟ್ಟಿದಾಗಿನಿಂದ 10 ವರ್ಷವಾಗುವುದರೊಳಗೆ ಯಾವಾಗ ಬೇಕಾದರೂ ಹಣವನ್ನೂ ಠೇವಣಿ ಇಡಬಹುದಾಗಿದೆ. ರು. 1000-ರು. 1.5 ಲಕ್ಷ ವರೆಗೆ ಠೇವಣಿ ಇಡಬಹುದು.

  •  ಯಾವುದೇ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬೇಕಾದರೂ ಖಾತೆ ತೆರೆಯಬಹುದು.
  •  ಕುಟುಂಬದ ಉಳಿತಾಯದಲ್ಲಿ ಗಂಡು ಮಗುವಿನಂತೆ ಹೆಣ್ಣು ಮಗುವಿಗೂ ಸಮಪಾಲು ಸಿಗಬೇಕೆಂಬ ನಿಟ್ಟಿನಲ್ಲಿ ಈ ಯೋಜನೆ  ಜಾರಿ.
  • ಈ ಹೆಣ್ಣು ಮಗುವಿಗೆ 21 ವರ್ಷ ಆಗುವವರೆಗೆ ಹಣವನ್ನು ಪಡೆಯಲು ಸಾಧ್ಯವಿಲ್ಲ. ಇಲ್ಲವೇ ಆಕೆಗೆ 18 ವರ್ಷ ತುಂಬಿದ ಬಳಿಕ ವಿವಾಹ ಕಾರಣಕ್ಕೆ ಠೇವಣಿ ಹಿಂಪಡೆಯಬಹುದು.
  •  ಆಕೆಯ ಉನ್ನತ ಶಿಕ್ಷಣದ ಸಲುವಾಗಿ ಬಳಸುವ ಸಂದರ್ಭ ಬಂದರೆ, ಈ ಠೇವಣಿಯಲ್ಲಿ ಶೇ. 50ರಷ್ಟನ್ನು ಮಾತ್ರ ಪಡೆಯಬಹುದು.
  •  18 ವರ್ಷಕ್ಕಿಂತ ಮೊದಲು ಹೆಣ್ಣು ಮಗುವಿನ ವಿವಾಹ ಮಾಡುವುದನ್ನು ತಡೆಯವುದೂ ಇದರ ಹಿಂದಿನ ಉದ್ದೇಶ.


ಮಾಧುರಿಗೆ ಶ್ಲಾಘನೆ

`ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನಕ್ಕೆ ರಾಯಭಾರಿಯಾಗಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಮಾಧುರಿಯವರ ತಾಯಿ ತೀವ್ರ ಅನಾರೋಗ್ಯದಿಂದ ಐಸಿಯುನಲ್ಲಿದ್ದಾರೆ. ಆದರೂ ಕಾರ್ಯಕ್ರಮಕ್ಕೆ ಬಂದಿರುವುದು ಅವರ ಕಾರ್ಯತತ್ಪರತೆ ತೋರಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

'ಸುಕನ್ಯಾ ಸಮೃದ್ಧಿ' ಖಾತೆಯ ಸಂಕ್ಷಿಪ್ತ ಮಾಹಿತಿ ತಿಳಿಯಿರಿ [ONE INDIA KANNADA]

ONE INDIA KANNADA


'ಸುಕನ್ಯಾ ಸಮೃದ್ಧಿ' ಖಾತೆಯ ಸಂಕ್ಷಿಪ್ತ ಮಾಹಿತಿ ತಿಳಿಯಿರಿ


'ಸುಕನ್ಯಾ ಸಮೃದ್ಧಿ' ಖಾತೆಯ ಸಂಕ್ಷಿಪ್ತ ಮಾಹಿತಿ ತಿಳಿಯಿರಿಮಾ.11 : ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 'ಸುಕನ್ಯಾ ಸಮೃದ್ಧಿ' ಹೆಸರಿನ ಉಳಿತಾಯ ಖಾತೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಆರ್ಥಿಕ ಸ್ವಾವಲಂಬನೆಗಾಗಿ ಒಂದು ಕುಟುಂಬ ಈ ಖಾತೆಯನ್ನು ತೆರೆಯಬಹುದಾಗಿದೆ. ಸುಕಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಗಳಲ್ಲಿ ತೆರೆಯಬೇಕು. ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ 'ಸುಕನ್ಯಾ ಸಮೃದ್ಧಿ' ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ. ಈ ಖಾತೆ ಆರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ. ಯಾರು ಖಾತೆ ತೆರೆಯಬಹುದು : ಸರ್ಕಾರಿ ಮತ್ತು ಖಾಸಗಿ ವಾಣಿಜ್ಯೋದ್ಯಮ ಸಂಸ್ಥೆಗಳ ನೌಕರರು, ವ್ಯಾಪಾರ, ಸ್ವಂತ ಉದ್ದಿಮೆ ಸೇರಿದಂತೆ ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯುವ ಸಂದರ್ಭದಲ್ಲಿ ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಗುರುತಿನ ಚೀಟಿ, ವಿಳಾಸ ದೃಢೀಕರಣ ದಾಖಲೆಗಳು ಅಗತ್ಯವಾಗಿವೆ. [30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?] ಎಷ್ಟು ಠೇವಣಿ ಇಡಬೇಕು : ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಆರಂಭಿಕ ಠೇವಣಿ 1000 ರೂ.. ಪ್ರತಿವರ್ಷ ಖಾತೆಗೆ ಕನಿಷ್ಠ 1000 ರೂ. ಜಮಾ ಮಾಡಬೇಕು. ಪ್ರತಿ ಹಣಕಾಸು ವರ್ಷದಲ್ಲಿ 1000 ರೂ.ನಿಂದ ಗರಿಷ್ಠ 1.5 ಲಕ್ಷ ರೂಪಾಯಿ ವರೆಗೆ ಜಮಾ ಮಾಡಲು ಅವಕಾಶವಿದೆ. ಹೂಡಿಕೆ ಮಾಡಿದ ಮೊತ್ತಕ್ಕೆ ವಾರ್ಷಿಕವಾಗಿ ಬಡ್ಡಿ, ಚಕ್ರಬಡ್ಡಿ ನೀಡಲಾಗುತ್ತದೆ. ಪ್ರಸಕ್ತ ಬಡ್ಡಿ ದರ ಶೇ 9.10. [ಅಂಚೆ ಕಚೇರಿಯಲ್ಲಿಯೂ ಶೀಘ್ರದಲ್ಲೇ ಎಟಿಎಂ ಸೌಲಭ್ಯ] 21 ವರ್ಷ ಖಾತೆ ಇರುತ್ತದೆ : ಇದೊಂದು ದೀರ್ಘಕಾಲಿನ ಉಳಿತಾಯ ಖಾತೆಯಾಗಿದೆ. ಸುಕನ್ಯಾ ಸಮೃದ್ಧಿ ಉಳಿತಾಯ ಖಾತೆಯು ಆರಂಭಗೊಂಡ ದಿನದಿಂದ 21 ವರ್ಷದವರೆಗೂ ಚಾಲ್ತಿಯಲ್ಲಿರುತ್ತದೆ. ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು. ವರ್ಗಾವಣೆಗೆ ಮಾಡಿಸಿಕೊಳ್ಳಬಹುದು : ನೀವು ಖಾತೆ ತೆರೆದ ಊರಿನಿಂದ ಬೇರೆ ಊರಿಗೆ ವರ್ಗಾವಣೆಗೊಂಡರೆ ಖಾತೆಯನ್ನು ಆ ಊರಿಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಸಮೀಪದ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಬಹುದಾಗಿದೆ. ಯೋಜನೆಯ ಎಲ್ಲಾ ಮಾಹಿತಿ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.

ಬೇಟಿ ಬಚಾವೊ ಬೇಟಿ ಪಡಾವೊ [KARNATAKA TIMES]

ಬೇಟಿ ಬಚಾವೊ ಬೇಟಿ ಪಡಾವೊ 

345
ಪಾಣಿಪತ್‌ : ಹೆಣ್ಣು ಭ್ರೂಣ­ಹತ್ಯೆ­ಯನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಖಂಡಿಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ತೋರುವ ತಾರತಮ್ಯದ ಧೋರಣೆ­ಯು ಜನರ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಇಲ್ಲಿ ಗುರುವಾರ ‘ಬೇಟಿ ಬಚಾವೊ ಬೇಟಿ ಪಡಾವೊ (ಹೆಣ್ಣು ಮಗು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಣ್ಣು ಭ್ರೂಣಹತ್ಯೆಗೆ ಪ್ರೋತ್ಸಾಹ ನೀಡುವ ವೈದ್ಯರನ್ನು ತರಾಟೆಗೆ ತೆಗೆದು­ಕೊಂಡ ಪ್ರಧಾನಿ ಮೋದಿ, ವೈದ್ಯರು ಇಂತಹ ಪಾಪ ಕೃತ್ಯ ಮಾಡುವ ಮೂಲಕ ಸಮಾಜಕ್ಕೆ ದ್ರೋಹ ಬಗೆಯು­ತ್ತಿದ್ದಾರೆ ಎಂದರು.
‘ಇನ್ನು ಮುಂದೆ ಹೆಣ್ಣು ಭ್ರೂಣಹತ್ಯೆ ಮಾಡುವುದಿಲ್ಲ ಮತ್ತು ಹೆಣ್ಣು ಮಕ್ಕಳ ಬಗ್ಗೆ ತಾರತಮ್ಯ ಮಾಡುವುದಿಲ್ಲ’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ಪ್ರಧಾನಿ ಪ್ರತಿಜ್ಞಾವಿಧಿ ಭೋದಿಸಿದರು. ಹರಿಯಾಣವನ್ನು ಉಲ್ಲೇಖಿ­ಸಿದ ಮೋದಿ, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಭಾರತದ ಮೊದಲ ಮಹಿಳೆ ಕಲ್ಪನಾ ಚಾವ್ಲಾ ಹರಿ­ಯಾಣ­ದವರು. ಇಂತಹ ಮತ್ತಷ್ಟು ಕಲ್ಪನಾ ಚಾವ್ಲಾ­ರನ್ನು ಭ್ರೂಣ­ದಲ್ಲೇ ಹತ್ಯೆ ಮಾಡ­ಲಾಗುತ್ತಿ­ರುವುದು ನೋವಿನ ಸಂಗತಿ’ ಎಂದರು.
ಸುಕನ್ಯಾ ಸಮೃದ್ಧಿ ಯೋಜನೆ: ಪ್ರಧಾನಿ ಮೋದಿ ಇದೇ ವೇಳೆ ‘ಸುಕನ್ಯಾ ಸಮೃದ್ಧಿ ಯೋಜನೆ (ಹೆಣ್ಣು ಮಕ್ಕಳ ಅಭಿ­ವೃದ್ಧಿ ಯೋಜನೆ)’ಗೆ ಚಾಲನೆ ನೀಡಿದರು. ಈ ಯೋಜನೆಯಡಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸ­ರಲ್ಲಿ ಬ್ಯಾಂಕ್ ಖಾತೆ ತೆರೆದರೆ ಆ ಖಾತೆಗೆ ಹೆಚ್ಚು ಬಡ್ಡಿ (ಶೇ 9.1) ಮತ್ತು ಆದಾಯ ತೆರಿಗೆ ರಿಯಾಯಿತಿ ನೀಡಲಾ­ಗುತ್ತದೆ. ಅಂಚೆ ಕಚೇರಿ ಮತ್ತು ವಾಣಿಜ್ಯ ಬ್ಯಾಂಕ್‌­ಗಳ ಅಧಿಕೃತ ಶಾಖೆಗಳಲ್ಲಿ ಕನಿಷ್ಠ ₨1000ದಿಂದ ಗರಿಷ್ಠ ₨1.5 ಲಕ್ಷ ಠೇವಣಿ­ಯಿಟ್ಟು ಈ ಖಾತೆ ಆರಂಭಿಸಬಹುದು.

ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ: ಇಲ್ಲಿದೆ 10 ಹೈಲೈಟ್ಸ್ - SUVARNA NEWS

SUVARNA NEWS

ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ: ಇಲ್ಲಿದೆ 10 ಹೈಲೈಟ್ಸ್


ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ: ಇಲ್ಲಿದೆ 10 ಹೈಲೈಟ್ಸ್ಬೆಂಗಳೂರು: ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ "ಸುಕನ್ಯಾ ಸಮೃದ್ಧಿ" ಯೋಜನೆಯನ್ನ ಜಾರಿಗೆ ತಂದಿದೆ. "ಬೇಟಿ ಬಚಾವೋ, ಬೇಟಿ ಪಡಾವೋ" ಆಶಯದಡಿಯಲ್ಲಿ ಈ ಯೋಜನೆಯನ್ನ ಆರಂಭಿಸಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಸಹಾಯವಾಗುವುದು ಈ ಯೋಜನೆಯ ಉದ್ದೇಶ. ಈ ಯೋಜನೆ ಬಗ್ಗೆ ಒಂದಷ್ಟು ಪ್ರಮುಖ ಮಾಹಿತಿಗಳು ಇಲ್ಲಿವೆ.
1) ಅವಧಿ ಎಷ್ಟು..?
ಒಟ್ಟು 21 ವರ್ಷ ಕಾಲಾವಧಿಯದ್ದಾಗಿದೆ. 14 ವರ್ಷಗಳ ಕಾಲ ಹಣ ಕಟ್ಟಬೇಕು. ತದನಂತರ 7 ವರ್ಷ ಗತಿಸಿದ ಬಳಿಕ ಯೋಜನೆಯ ಸಂಪೂರ್ಣ ಫಲವನ್ನ ಪಡೆದುಕೊಳ್ಳಬಹುದು.
2) ಎಷ್ಟು ಕಟ್ಟಬೇಕು..?
ಈ ಯೋಜನೆಯ ವಾರ್ಷಿಕ ಮೊತ್ತ 1 ಸಾವಿರದಿಂದ 1.5 ಲಕ್ಷ ರೂಪಾಯಿವರೆಗೂ ಇದೆ. ನೀವು ಪ್ರತಿವರ್ಷ ಎಷ್ಟು ಬೇಕಾದರೂ ಹಣವನ್ನ (1 ಸಾವಿರದಿಂದ ಒಂದೂವರೆ ಲಕ್ಷದವರೆಗೆ) ಪಾವತಿಸಬಹುದು.
3) ಯಾವಾಗ್ಯಾವಾಗ ಕಟ್ಟಬೇಕು..?
ನೀವು ಯಾವಾಗ ಬೇಕಾದರೂ ಹಣ ಕಟ್ಟಿಬಹುದು. ಇವತ್ತು 500, ನಾಳೆ 100, ಒಂದಷ್ಟು ದಿನದ ಬಳಿಕ ಇನ್ನಷ್ಟು ಹಣ... ಹೀಗೆ ಕನಿಷ್ಠ 100 ರೂಪಾಯಿಯಿಂದ ನೀವು ಯಾವಾಗ ಬೇಕಾದರೂ ಹಣ ಪಾವತಿ ಮಾಡಬಹುದು.
4) ಯಾವ ವಯಸ್ಸಿನ ಹುಡುಗಿ..?
ಹತ್ತು ವರ್ಷದ ವಯಸ್ಸಿನ ಮಿತಿ ದಾಟದ ಬಾಲಕಿಯರಿಗೆ ಈ ಯೋಜನೆ ಅನ್ವಯವಾಗುತ್ತದೆ. ಬಾಲಕಿಯ ಹೆಸರಿನಲ್ಲಿ ಆಕೆಯ ಪೋಷಕರು ಈ ಖಾತೆಯನ್ನ ಆರಂಭಿಸಿ, ನಿರ್ವಹಿಸಬಹುದಾಗಿದೆ. ಆದರೆ, ಬಾಲಕಿ ವಯಸ್ಸು 10 ವರ್ಷವನ್ನ ದಾಟಿದರೆ ಆ ಖಾತೆಯನ್ನ ನಿರ್ವಹಿಸಲು ಆಕೆಗೆ ಹಕ್ಕು ಸಿಗುತ್ತದೆ.
5) ಖಾತೆ ತೆರೆಯುವುದು ಹೇಗೆ..?
ನಿಮ್ಮ ಪ್ರದೇಶದಲ್ಲಿರುವ ಯಾವುದೇ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳ ನಿರ್ದಿಷ್ಟ ಕಚೇರಿಗಳಲ್ಲಿ ಖಾತೆ ತೆರೆಯಬಹುದು.
6) ಹಣ ಪಾವತಿ ವಿಳಂಬವಾದಾಗ...?
ಒಂದು ವೇಳೆ, ಒಂದಿಡೀ ವರ್ಷ ಹಣ ಕಟ್ಟದೇ ಇದ್ದಲ್ಲಿ ಈ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ. ಅದನ್ನು ಪುನಾರಂಭಿಸಲು ಸುಮಾರು 50 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
7) ತೆರಿಗೆ ಲಾಭ ಹೇಗೆ..?
ಈ ಯೋಜನೆ ಆದಾಯ ತೆರಿಗೆಯಿಂದ ವಿಮುಕ್ತವಾಗಿದೆ. ಮೆಚ್ಯೂರಿಟಿ ಬಳಿಕ ಬಂದ ಹಣಕ್ಕೆ ಯಾವ ತೆರಿಗೆಯನ್ನೂ ಪಾವತಿಸಬೇಕಾಗಿಲ್ಲ.
8) ಬಡ್ಡಿ ದರದ ಲಾಭ..?
ಕೇಂದ್ರ ಸರ್ಕಾರ ಈ ಯೋಜನೆಯಲ್ಲಿಡುವ ಠೇವಣಿಗೆ ಶೇ. 9.1ರಷ್ಟು ವಾರ್ಷಿಕ ಬಡ್ಡಿಯನ್ನ ಸದ್ಯಕ್ಕೆ ಘೋಷಣೆ ಮಾಡಿದೆ. ಇಷ್ಟು ಪ್ರಮಾಣದ ಬಡ್ಡಿಯನ್ನ ಯಾವುದೇ ಬ್ಯಾಂಕುಗಳು ನೀಡುತ್ತಿಲ್ಲವೆಂಬುದು ಇಲ್ಲಿ ಗಮನಾರ್ಹ. ಅಲ್ಲದೇ, ಈ ಯೋಜನೆಗೆ ಬಡ್ಡಿಯನ್ನ ನಿಗದಿಪಡಿಸುವುದು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಲ, ಬದಲಾಗಿ ಖುದ್ದು ಸರ್ಕಾರವೇ ಬಡ್ಡಿದರವನ್ನ ಬೇಕೆಂದಾಗ ಬದಲಿಸಬಹುದಾಗಿದೆ.
9) ಮಧ್ಯದಲ್ಲಿ ಹಣ ಬೇಕೆಂದರೆ..?
ಬಾಲಕಿಯ ವಯಸ್ಸು 18 ವರ್ಷ ದಾಟಿದಾಗ, ಅಥವಾ ಆಕೆಯ ಮದುವೆ ಫಿಕ್ಸ್ ಆದಾಗ ಖಾತೆಯಲ್ಲಿ ಆವರೆಗೆ ಜಮೆಯಾದ ಹಣದಲ್ಲಿ ಶೇ. 50ರಷ್ಟು ಮೊತ್ತವನ್ನ ಹಿಂಪಡೆದುಕೊಳ್ಳುವ ಅವಕಾಶವಿದೆ.
10) ಬೇರೆ ಊರುಗಳಿಗೆ ಸ್ಥಳಾಂತರವಾದರೆ..?
ಒಂದು ಪ್ರದೇಶದಲ್ಲಿ ಖಾತೆಯನ್ನ ತೆರೆದು, ಒಂದಷ್ಟು ವರ್ಷಗಳ ಬಳಿಕ ಬೇರೆ ಊರಿಗೆ ಸ್ಥಳಾಂತರವಾದರೆ, ಈ ಸುಕನ್ಯ ಸಮೃದ್ಧಿ ಖಾತೆಯನ್ನೂ ಆಯಾ ಊರಿಗೆ ವರ್ಗಾಯಿಸಿಕೊಳ್ಳುವ ಅವಕಾಶವಿದೆ
- See more at: http://www.suvarnanews.tv/magazine/article/10777_highlights-of-sukanya-samriddhi-yojana#sthash.30nvXwBh.dpuf

ಕೇಂದ್ರದಿಂದ ಬಾಲೆಯರಿಗೆ ಸುಕನ್ಯಾ ಸಮೃದ್ಧಿ ಖಾತೆ [PRAJAVANI]

ನವದೆಹಲಿ (ಪಿಟಿಐ): ಸಣ್ಣ ಉಳಿತಾಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ವಿಶೇಷ ಠೇವಣಿ ಯೋಜನೆ ‘ಸುಕನ್ಯಾ ಸಮೃದ್ಧಿ ಖಾತೆ’ಯನ್ನು ಗುರುವಾರ ಪರಿಚಯಿಸಿದೆ.
ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಯಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ 10 ವರ್ಷಗಳವರೆಗೆ ಖಾತೆ ತೆರೆಯ­ಬಹುದು. ಖಾತೆ ತೆರೆದು 21 ವರ್ಷಗಳ ಬಳಿಕ ಹಣ ಪಡೆಯ­ಬಹುದು. 14 ವರ್ಷಗಳ ವರೆಗೆ ಠೇವಣಿ ಇಡಬೇಕಾಗುತ್ತದೆ. ಠೇವಣಿ­ಯಲ್ಲಿ ಅರ್ಧದಷ್ಟು ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಬಳಸಬಹುದು.
ವಿಶೇಷ ಬಡ್ಡಿದರ
ಈ ಯೋಜನೆಗೆ ವಿಶೇಷ ಬಡ್ಡಿದರವನ್ನೂ ನೀಡುವುದಾಗಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಾದ್ಯಂತ ಯಾವ ಸ್ಥಳಕ್ಕೆ ಬೇಕಿದ್ದರೂ ಖಾತೆ ವರ್ಗಾವಣೆ ಮಾಡಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ: ಪಿಪಿಎಫ್‌ಗಿಂತಲೂ ಉತ್ತಮವೆ? [vijaya karnataka]


ಸುಕನ್ಯಾ ಸಮೃದ್ಧಿ ಯೋಜನೆ: ಪಿಪಿಎಫ್‌ಗಿಂತಲೂ ಉತ್ತಮವೆ?


3
ಸುಕನ್ಯಾ ಸಮೃದ್ಧಿ ಯೋಜನೆ: ಪಿಪಿಎಫ್‌ಗಿಂತಲೂ ಉತ್ತಮವೆ?
ಹೊಸದಿಲ್ಲಿ: ನಿಮ್ಮ ಪುಟ್ಟ ಮಗಳ ಶಿಕ್ಷಣ ಅಥವಾ ಮದುವೆಗಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಅಥವಾ ನಿಗದಿತ ಠೇವಣಿ ಖಾತೆ ತೆರೆಯುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಾದರೆ ಅದಕ್ಕಿಂತ ಉತ್ತಮ ಪರ್ಯಾಯ ಆಯ್ಕೆ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಈಗ ಲಭ್ಯವಿದೆ. ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ 'ಬೇಟಿ ಬಚಾವೋ, ಬೇಟಿ ಪಢಾವೋ' ಕಾರ್ಯಕ್ರಮದ ಭಾಗವಾಗಿ ಈ ಯೋಜನೆಗೆ ಜನವರಿಯಲ್ಲಿ ಚಾಲನೆ ನೀಡಲಾಗಿದೆ. ಇದರಲ್ಲಿ ಕೂಡಿಡುವ ಹಣಕ್ಕೆ ಸೆಕ್ಷನ್‌ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯೂ ಇದೆ.

ಸುಕನ್ಯಾ ಸಮೃದ್ಧಿ ಯೋಜನೆಯು ಪಿಪಿಎಫ್‌ಗಿಂತಲೂ ಉತ್ತಮ ಆಯ್ಕೆ; ಏಕೆಂದರೆ ಇದರ ಬಡ್ಡಿದರ ಪಿಪಿಎಫ್‌ಗಿಂತಲೂ ಹೆಚ್ಚು. ಪಿಪಿಎಫ್‌ನಲ್ಲಿ 10 ವರ್ಷ ಅವಧಿಯ ಸರಕಾರಿ ಬಾಂಡ್‌ಗಿಂತಲೂ 25 ಬೇಸಿಸ್‌ ಪಾಯಿಂಟ್‌ಗಳಷ್ಟು ಹೆಚ್ಚು ಬಡ್ಡಿ ಲಭ್ಯವಿದ್ದರೆ, ಎಸ್‌ಎಸ್‌ವೈನಲ್ಲಿ ಸರಕಾರಿ ಬಾಂಡ್‌ಗಳಿಗಿಂತ 75 ಬೇಸಿಸ್‌ ಪಾಯಿಂಟ್‌ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಪಿಪಿಎಫ್‌ನಲ್ಲಿ ಪ್ರಸ್ತುತ ಶೇ 8.7ರ ಬಡ್ಡಿ ಲಭ್ಯವಿದ್ದರೆ, ಎಸ್‌ಎಸ್‌ವೈನಲ್ಲಿ ಶೇ 9.1ರಷ್ಟು ಬಡ್ಡಿದರವಿದೆ. ಹೀಗಿರುವಾಗ ಸುಕನ್ಯಾ ಸಮೃದ್ಧಿ ಯೋಜನೆಯೇ ಪಿಪಿಎಫ್‌ಗಿಂತ ಉತ್ತಮವಲ್ಲವೆ?

ಎಸ್‌ಎಸ್‌ವೈ ಆಕರ್ಷಕ ಯೋಜನೆಯಾಗಿದ್ದರೂ ಎಲ್ಲರಿಗೂ ಲಭ್ಯವಿಲ್ಲ. ಎಸ್‌ಎಸ್‌ವೈ ಖಾತೆಯನ್ನು 10 ವರ್ಷದೊಳಗಿನ ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಹೆತ್ತವರು ಅಥವಾ ಪೋಷಕರು ತೆರೆಯಬಹುದು. ಈ ವರ್ಷದ ಮಟ್ಟಿಗೆ ಮಾತ್ರ ಒಂದು ವರ್ಷದ ವಯೋಮಿತಿ ವಿನಾಯ್ತಿ ನೀಡಲಾಗಿದ್ದು, 2015ರ ಡಿಸೆಂಬರ್ 1ರಂದು 11 ವರ್ಷ ತುಂಬವ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಖಾತೆ ತೆರಯಬಹುದು. 2003ರ ಡಿಸೆಂಬರ್‌ 2ರ ಮೊದಲು ಜನಿಸಿದ ಮಕ್ಕಳು ಈ ಖಾತೆಗೆ ಅರ್ಹರಲ್ಲ.

ಖಾತೆಯನ್ನು ಎಲ್ಲಿ ತೆರೆಯಬಹುದು?:


ಯಾವುದೇ ಅಂಚೆ ಕಚೇರಿ ಅಥವಾ ಸಾರ್ವಜನಿಕ ರಂಗದ ಬ್ಯಾಂಕುಗಳ ನಿರ್ದಿಷ್ಟ ಶಾಖೆಗಳಲ್ಲಿ ಕನಿಷ್ಠ 1,000 ರೂ.ಗಳ ಠೇವಣಿಯೊಂದಿಗೆ ಎಸ್‌ಎಸ್‌ವೈ ಖಾತೆ ತೆರೆಯಬಹುದು. ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ.ಗಳ ವರೆಗೂ ಠೇವಣಿ ಇಡಬಹುದು. ಮುಂದಿನ 14 ವರ್ಷಗಳ ವರೆಗೆ ಖಾತೆಗೆ ಹಣ ತುಂಬಬಹುದು. ಒಬ್ಬ ತಂದೆ/ತಾಯಿ ಹೆಚ್ಚೆಂದರೆ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಆದರೆ ಎರಡೂ ಖಾತೆಗಳಲ್ಲಿ ಒಟ್ಟಾಗಿ ವಾರ್ಷಿಕ ಠೇವಣಿಯ ಮಿತಿ 1.5 ಲಕ್ಷ ರೂ ಮೀರುವಂತಿಲ್ಲ. ಹೆಣ್ಣು ಮಗುವಿಗೆ 21 ವರ್ಷವಾದಾಗ ಖಾತೆ ಪರಿಪಕ್ವತೆ ಪಡೆಯುತ್ತದೆ. ಹಾಗಿದ್ದರೂ 18 ವರ್ಷ ತುಂಬಿದಾಗ ಅಥವಾ ಅವಳ ಮದುವೆ ಸಂದರ್ಭದಲ್ಲಿ ಒಟ್ಟು ಮೊತ್ತದ ಶೇ 50ರಷ್ಟನ್ನು ಹಿಂತೆಗೆಯುವ ಅವಕಾಶವಿದೆ. ಹಣಕಾಸು ತಜ್ಞರ ಪ್ರಕಾರ, ಪಿಪಿಎಫ್‌ನಲ್ಲಿ 15 ವರ್ಷಗಳ ಕಾಲ ಹೂಡಿದ ಹಣವನ್ನು ಮನೆ ಖರೀದಿಸಲು, ಮಕ್ಕಳ ಶಿಕ್ಷಣ ಅಥವಾ ಮದುವೆಯ ವೆಚ್ಚಕ್ಕಾಗಿ ಬಳಸಲು ಅವಕಾಶವಿದೆ. ಆದರೆ ನಿರ್ದಿಷ್ಟ ಉದ್ದೇಶಕ್ಕಾಗಿ ಹೂಡಿಕೆ ಮಾಡಬೇಕೆಂಬ ಕಲ್ಪನೆ ಪಿಪಿಎಫ್‌ ನೀಡುವುದಿಲ್ಲ. ಆದರೆ ಎಸ್‌ಎಸ್‌ವೈ ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ.

ಹೆಣ್ಣು ಮಗುವಿಗೆ 10 ವರ್ಷವಾದಾಗ ಹೂಡಿಕೆ ಆರಂಭಿಸುವ ದಂಪತಿಗಳು, ವಾರ್ಷಿಕ 1.5 ಲಕ್ಷ ಹಣವನ್ನು ಎಸ್‌ಎಸ್‌ವೈನಲ್ಲಿ ಠೇವಣಿ ಇರಿಸಿದರೆ ಪರಿಪಕ್ವತೆಯ ಬಳಿಕ (ಹನ್ನೊಂದು ವರ್ಷದ ಬಳಿಕ) 28.89 ಲಕ್ಷ ರೂ ವರೆಗೆ ದೊರಕಬಹುದು. ಅಂತೆಯೇ 5 ವರ್ಷದ ಮಗುವಿನ ಹೆಸರಿನಲ್ಲಿ 14 ವರ್ಷಗಳ ಕಾಲ ಉಳಿತಾಯ ಮಾಡಿದರೆ, ಆಕೆಗೆ 19 ವರ್ಷ ತುಂಬಿದಾಗ 42.88 ಲಕ್ಷ ರೂ ಸಿಗುತ್ತದೆ.

ಇಂದಿನ ಮಾನದಂಡಗಳಲ್ಲಿ ಈ ಮೊತ್ತ ಆಕರ್ಷಕವಾಗಿ ಕಂಡರೂ 2031ರ ವೇಳೆಗೆ ಕಾಲೇಜು ಶಿಕ್ಷಣದ ಶುಲ್ಕ ಕಟ್ಟಲು ಈ ಮೊತ್ತ ಸಾಕಾಗುವುದಿಲ್ಲ. ವಿದೇಶದಲ್ಲಿ ಪದವಿ ಶಿಕ್ಷಣ ಪಡೆಯಬೇಕಿದ್ದರೆ ಈಗಲೇ ಕನಿಷ್ಠ 25 ಲಕ್ಷ ರೂ ವೆಚ್ಚ ತಗಲುತ್ತದೆ. ಹೀಗಿರುವಾಗ ಮುಂದಿನ ವರ್ಷಗಳಲ್ಲಿ ಈ ಮೊತ್ತ ಅಷ್ಟೇನೂ ದೊಡ್ಡದೆಂದು ಅನಿಸುವುದಿಲ್ಲ. ಹೀಗಾಗಿ ಈಕ್ವಿಟಿ ಫಂಡ್‌ಗಳಂತಹ ಇತರ ಯೋಜನೆಗಳ ಜತೆಗೆ ಈ ಹೂಡಿಕೆಯನ್ನು ಮಾಡಿದರೆ ಹೆಚ್ಚಿನ ಲಾಭವಿದೆ ಎನ್ನುತ್ತಾರೆ ಫೈನಾನ್ಷಿಯಲ್‌ ಪ್ಲಾನರ್‌ ಸುರೇಶ್‌ ಸಡಗೋಪನ್‌.

ಉನ್ನತ ಶಿಕ್ಷಣಕ್ಕೆ ‘ಸುಕನ್ಯಾ ಸಮೃದ್ಧಿ ಖಾತೆ’ ಯೋಜನೆ [vijaya karnataka]

ಉನ್ನತ ಶಿಕ್ಷಣಕ್ಕೆ ‘ಸುಕನ್ಯಾ ಸಮೃದ್ಧಿ ಖಾತೆ’ ಯೋಜನೆ
ಬಾಲೆಯರ ಬಲವರ್ಧನೆಗೆ ಮುಂದಾದ ಅಂಚೆ ಇಲಾಖೆ

* ನವೀನ್ ಬಿಲ್ಗುಣಿ ಹುಬ್ಬಳ್ಳಿ
ಅಕ್ವಗಾರ್ಡ್ ನೀರು ಶುದ್ಧೀಕರಣ ಯಂತ್ರ, ಮೈ ಸ್ಟಾಂಪಿಂಗ್, ಸೌರ ದೀಪ, ಪೋಸ್ಟ್ ಶಾಪಿ ಸೇರಿದಂತೆ ಹಲವು ಗ್ರಾಹಕ ಮತ್ತು ಜನಸ್ನೇಹಿ ಸೇವೆಗಳನ್ನು ನೀಡುತ್ತಿರುವ ಅಂಚೆ ಇಲಾಖೆ ಇದೀಗ ಕೇಂದ್ರ ಸರಕಾರದ 'ಸುಕನ್ಯಾ ಸಮೃದ್ಧಿ ಖಾತೆ ಯೋಜನೆ'ಯನ್ನೂ ಆರಂಭಿಸಿದೆ.

ಸಣ್ಣ ಉಳಿತಾಯಕ್ಕೆ ಉತ್ತೇಜನ, ಅಧಿಕ ಬಡ್ಡಿ ಸೌಲಭ್ಯ ಸೇರಿದಂತೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಮದುವೆಗಾಗಿ 'ಹೆಣ್ಣು ಮಗು ಉಳಿಸಿ-ಹೆಣ್ಣು ಮಗು ಓದಿಸಿ' ಎಂಬ ಘೋಷವಾಕ್ಯದೊಂದಿಗೆ ಬುಧವಾರದಿಂದ ಆರಂಭಿಸಲಾಗಿರುವ ಯೋಜನೆ ಕುರಿತು ಜಾಗೃತಿ ಮೂಡಿಸಲು ಅಂಚೆ ಇಲಾಖೆ ಅಧಿಕಾರಿಗಳು ಪಣ ತೊಟ್ಟಿದ್ದಾರೆ.

10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಲ್ಲಿ ಖಾತೆ ತೆರೆದು 21 ವರ್ಷಗಳ ಬಳಿಕ ಹಣ ಪಡೆಯುವ ಮಹತ್ವದ ಯೋಜನೆ ಇದಾಗಿದೆ. ಖಾತೆ ತೆರೆದ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡಬೇಕು. ಠೇವಣಿಯಲ್ಲಿ ಅರ್ಧದಷ್ಟು ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಬಳಕೆ ಮಾಡಿಕೊಳ್ಳಬಹುದು. ಹಾಗಾಗಿ ಎಲ್ಲ ಅಂಚೆ ಕಚೇರಿಗಳಲ್ಲಿ ಫ್ಲೆಕ್ಸ್, ನಾಮಫಲಕಗಳನ್ನು ಹಾಕುವ ಮೂಲಕ ಗ್ರಾಹಕರನ್ನು ಯೋಜನೆಯತ್ತ ಸೆಳೆಯಲು ಅಂಚೆ ಇಲಾಖೆ ಮುಂದಾಗಿದೆ.

2003 ಡಿಸೆಂಬರ್ 3 ಅಥವಾ ನಂತರದ ದಿನಗಳಲ್ಲಿ ಜನಿಸಿದ ಹೆಣ್ಣು ಮಗು ಖಾತೆ ಹೊಂದಲು ಅರ್ಹವಾಗಿರುತ್ತದೆ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದಾಗಿದ್ದು, ಖಾತೆ ಆರಂಭಕ್ಕೆ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ವಿಳಾಸ ಮತ್ತು ಗುರುತಿನ ಚೀಟಿ ಪ್ರತಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.

ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಯೊಂದರಲ್ಲೇ ಬುಧವಾರ 5 ಖಾತೆ ತೆರೆಯಲಾಗಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಖಾತೆಗಳನ್ನು ತೆರೆಯಲಾಗಿದೆ. ಒಂದು ಸಾವಿರ ರೂ. ಜಮಾ ಮಾಡುವ ಮೂಲಕ ಖಾತೆ ಆರಂಭಿಸಬೇಕು. ವರ್ಷಕ್ಕೆ 1.50 ಲಕ್ಷ ರೂ.ವರೆಗೂ ಜಮಾ ಮಾಡಬಹುದಾಗಿದೆ. ಮುಂದಿನ ಜಮಾವಣೆಗಳನ್ನು 100 ರೂ. ಗುಣಕದಲ್ಲಿ ಮಾಡಬೇಕು. ಖಾತೆ ಆರಂಭಗೊಂಡು 14 ವರ್ಷದವರೆಗೆ ಮಾತ್ರ ಹಣ ಜಮಾ ಮಾಡಬೇಕು ಎನ್ನುತ್ತಾರೆ ಹುಬ್ಬಳ್ಳಿ ಪ್ರಧಾನ ಕಚೇರಿ ಹಿರಿಯ ಅಂಚೆ ಅಧಿಕಾರಿ ಎಚ್.ಎಸ್.ಹುನಗುಂದ.

ಖಾತೆಯ ಮೇಲೆ ಶೇ. 9.1 ಬಡ್ಡಿ ಜತೆಗೆ ಪ್ರತಿವರ್ಷ ಚಕ್ರಬಡ್ಡಿಯೂ ಅನ್ವಯವಾಗಲಿದೆ. ಇದು ವಿಶೇಷ ಬಡ್ಡಿದರ. ದೇಶದ ಯಾವ ಸ್ಥಳಕ್ಕೆ ಬೇಕಿದ್ದರೂ ಖಾತೆ ವರ್ಗಾವಣೆ ಮಾಡಿಕೊಳ್ಳಬಹುದು. ಜತೆಗೆ 18 ವರ್ಷ ತುಂಬಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಸಲು ಮತ್ತು ಬಡ್ಡಿ ಸಮೇತ ಶೇ. 50 ಹಣ ಪಡೆದುಕೊಳ್ಳಬಹುದು. 21 ವರ್ಷದೊಳಗೆ ಮದುವೆ ಆದಲ್ಲಿ ಪೂರ್ಣ ಹಣ ವಾಪಸ್ ಪಡೆಯಲು ಅವಕಾಶವಿದೆ ಎನ್ನುತ್ತಾರೆ ಹುನಗುಂದ.
-----

ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬಡ್ಡಿ ದರ ಇದಾಗಿದ್ದು, ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರಕಾರ 'ಸುಕನ್ಯಾ ಸಮೃದ್ಧಿ ಖಾತೆ' ಯೋಜನೆ ಆರಂಭಿಸಿದೆ. ಬುಧವಾರ ಸರಕಾರದ ಆದೇಶದ ಪ್ರತಿ ಲಭಿಸಿದ್ದು, ಎಲ್ಲಾ ಅಂಚೆ ಕಚೇರಿಗಳಲ್ಲೂ ಖಾತೆ ತೆರೆಯಬಹುದಾಗಿದೆ.
* ನಾಗೇಶ ಮಾನ್ವಿ, ಧಾರವಾಡ ಹಿರಿಯ ಅಂಚೆ ಅಧೀಕ್ಷಕ

ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ [ಉದಯವಾಣಿ]



ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ

    


image: http://www.udayavani.com/sites/default/files/images/go.png
ಮೋದಿ ಸರಕಾರದ ಆಶೋತ್ತರಗಳಲ್ಲಿ ಒಂದಾದ "ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯ ಅಂಗವಾಗಿ ಇದೀಗ ಕೇಂದ್ರ ಸರಕಾರವು ಮೈನರ್‌ ಹೆಣ್ಣುಮಕ್ಕಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ "ಸುಕನ್ಯಾ ಸಮೃದ್ಧಿ' ಯೋಜನೆಯನ್ನು 2 ಡಿಸೆಂಬರ್‌ 2014ರಂದು ಬಿಡುಗಡೆ ಮಾಡಿದೆ. ಇದರ ವಿದ್ಯುಕ್ತ ಅನಾವರಣ ಜ. 21ರಂದು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಇದೊಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಇದರ ಖಾತೆಗಳನ್ನು ತೆರೆಯಬಹುದಾಗಿದೆ. ಈ ಖಾತೆಯನ್ನು ಹೆತ್ತವರು ಅಥವಾ ರಕ್ಷಕರು ತೆರೆಯಬಹುದಾಗಿದೆ. ಹೆತ್ತವರು/ರಕ್ಷಕರು ಕೇವಲ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದಾಗಿದೆ. ಆದರೆ ಅವಳಿ/ತ್ರಿವಳಿ ಹೆರಿಗೆಯಾಗಿದ್ದಲ್ಲಿ ಮೂರನೆಯ ಹೆಣ್ಣು ಮಗುವಿಗೂ ಖಾತೆ ತೆರೆಯಬಹುದು. ಒಂದು ಹೆಣ್ಣು ಮಗುವಿನ ಮೇಲೆ ದೇಶದಾದ್ಯಂತ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ.
ವಯೋ ಮಿತಿ: ಖಾತೆ ತೆರೆಯುವಾಗ ಹೆಣ್ಣು ಮಗುವಿಗೆ 10 ವರ್ಷ ವಯಸ್ಸು ಮೀರಿರಬಾರದು. ಆದರೆ ಸ್ಕೀಮು ಆರಂಭದ (2-12-2014) ಹಿಂದಿನ 1 ವರ್ಷದಲ್ಲಿ 10 ತುಂಬಿದವರಿಗೂ ಒಂದು ವಿಶೇಷ ರಿಯಾಯಿತಿಯಾಗಿ ಈ ಖಾತೆಯನ್ನು ತೆರೆಯುವ ಅನುಮತಿ ನೀಡಲಾಗಿದೆ (ಅಂದರೆ 2 ಡಿಸೆಂಬರ್‌ 2013ರಿಂದ 1 ಡಿಸೆಂಬರ್‌ 2014ರಲ್ಲಿ 10 ತುಂಬಿದವರು).
ಖಾತೆ ಚಲಾವಣೆ: ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ಅನಂತರ ಹೆಣ್ಣು ಮಗು ಸ್ವತಃ ಚಲಾಯಿಸ ಬಹುದಾಗಿದೆ. ಇದಕ್ಕಾಗಿ ಒಂದು ಪಾಸ್‌ ಬುಕ್‌ ನೀಡಲಾಗುತ್ತದೆ.
ಖಾತೆಯ ಅವಧಿ: ಈ ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷಗಳವರೆಗೆ. ಆ ಮೊದಲೇ ಹೆಣ್ಣುಮಗುವಿಗೆ ಮದುವೆಯಾದರೆ ಖಾತೆ ಅಲ್ಲಿಗೇ ಅಂತ್ಯವಾಗುತ್ತದೆ. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 14 ವರ್ಷಗಳು ಮಾತ್ರ. ಕಂತು: ಕನಿಷ್ಠ ರೂ. 1,000ದೊಂದಿಗೆ ಈ ಖಾತೆಯ ಆರಂಭ ಮಾಡಬಹುದು. ಆ ಬಳಿಕ ವಾರ್ಷಿಕ ಕನಿಷ್ಠ ರೂ. 100 ಅಥವಾ ಗರಿಷ್ಠ ರೂ. 1,50,000ವನ್ನು ಈ ಖಾತೆಗೆ ಕಟ್ಟಬಹುದು. ಕನಿಷ್ಠ ಪಾವತಿಯನ್ನು ಮಾಡದ ವರ್ಷ ರೂ. 50 ದಂಡ ತಗಲುತ್ತದೆ.
ಬಡ್ಡಿ ದರ: ಅಂಚೆಯ ಸಣ್ಣ ಉಳಿತಾಯದಲ್ಲಿ ಪ್ರತಿ ವರ್ಷವೂ ಬಡ್ಡಿ ದರಗಳನ್ನು ಪೂರ್ವಭಾವಿಯಾಗಿ ಘೋಷಿಸುವ ಕಾನೂನು ಬಂದಿದೆ. ಹಾಗೆಯೇ ಈ ಸ್ಕೀಮಿನ ಬಡ್ಡಿ ದರವೂ ಪ್ರತಿ ವರ್ಷ ಬದಲಾಗುತ್ತದೆ. ಸದ್ಯಕ್ಕೆ ಅನ್ವಯವಾಗುವಂತೆ (ವಿತ್ತೀಯ ವರ್ಷ 2014-15) ಘೋಷಿತವಾದ ಬಡಿª ದರ 9.1%. ಇದು ಪಿಪಿಎಫ್ (8.7%) 10-ವರ್ಷದ ಎನ್‌ಎಸ್‌ಸಿ (8.8%) ಹಾಗೂ ಎಮ್‌ಐಎಸ್‌ (8.4%) ಗಳಿಗಿಂತ ಜಾಸ್ತಿ. ಸೀನಿಯರ್‌ ಸಿಟಿಜನ್‌ ಸ್ಕೀಮಿನಲ್ಲಿ ಮಾತ್ರ ಅಂಚೆ ಇಲಾಖೆ 9.2% ಬಡ್ಡಿ ದರ ನೀಡುತ್ತದೆ. 9.1% ಬಡ್ಡಿದರವು ಇಲ್ಲಿ ವಾರ್ಷಿಕವಾಗಿ ಚಕ್ರೀಕೃತಗೊಳ್ಳುತ್ತದೆ. ಬಡ್ಡಿಯನ್ನು ಪಿಪಿಎಫ್ ಖಾತೆಯ ಮಾದರಿಯಲ್ಲಿಯೇ ಲೆಕ್ಕ ಹಾಕಲಾಗುತ್ತದೆ. ಪಕ್ಕದಲ್ಲಿ ನೀಡಲಾದ ಟೇಬಲ್‌ನಲ್ಲಿ ಮಾಸಿಕ ರೂ. 1,000 ಕಂತು ಕಟ್ಟುವಲ್ಲಿ 21 ವರ್ಷಗಳ ಬಡ್ಡಿ ಮತ್ತು ವರ್ಷಾಂತ್ಯದ ಮೊತ್ತಗಳನ್ನು ನೀಡಲಾಗಿದೆ.
ಅವಧಿಪೂರ್ವ ಹಿಂಪಡೆತ/ಸಾಲ: ಪಿಪಿಎಫ್ ಖಾತೆಯಂತೆಯೇ ಇಲ್ಲೂ ಅವಧಿಪೂರ್ವ ಹಿಂಪಡೆತ ಮಾಡಬಹುದಾಗಿದೆ. ಖಾತೆದಾರಳ ಉಚ್ಚ ಶಿಕ್ಷಣದ ಸಂದರ್ಭದಲ್ಲಿ ಅಥವಾ ಮದುವೆಯ ನಿಮಿತ್ತ ಖಾತೆಯಲ್ಲಿ ಹಿಂದಿನ ವರ್ಷಾಂತ್ಯದಲ್ಲಿದ್ದ ಮೊತ್ತದ 50% ಭಾಗವನ್ನು ಹಿಂಪಡೆಯಬಹುದಾಗಿದೆ. ಆದರೆ ಇದಕ್ಕಾಗಿ ಅವಳಿಗೆ 18 ತುಂಬಿರಬೇಕಾದುದು ಅವಶ್ಯ. ಇದರಲ್ಲಿ ಪಿಪಿಎಫ್ನಂತೆ ಸಾಲ ಸೌಲಭ್ಯ ಇಲ್ಲ.
ಕರ ವಿನಾಯಿತಿ: ಈ ಯೋಜನೆಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಕರವಿನಾಯಿತಿಯನ್ನು ಘೋಷಿಸಲಾಗಿದೆ. ಅಂದರೆ ಪಿಪಿಎಫ್, ವಿಮೆ, 5-ವರ್ಷದ ಬ್ಯಾಂಕ್‌ ಎಫ್ಡಿ, ಎನ್‌ಎಸ್‌ಸಿ ಇತ್ಯಾದಿ ಯೋಜನೆಗಳ ಒಟ್ಟಾರೆ ಮಿತಿ ರೂ. 1,50,000ದ ಒಳಗೆ ಇದನ್ನೂ ಸೇರಿಸಿಕೊಳ್ಳಲಾಗಿದೆ.
ಆದರೆ ಇದರಿಂದ ಬರುವ ಬಡ್ಡಿಯ ಮೇಲೆ ಯಾವುದೇ ಕರ ವಿನಾಯಿತಿ ಇರುವುದಿಲ್ಲ. ಮೈನರ್‌ ಇರುವಷ್ಟು ಕಾಲ ಈ ಬಡ್ಡಿಯನ್ನು ಹೆತ್ತವರ/ರಕ್ಷಕರ ಆದಾಯಕ್ಕೆ ಸೇರಿಸಿ ಕರ ಕಟ್ಟ ಬೇಕು. ಆ ಬಳಿಕ ಅದು ಅವಳ ಪಾಲಿಗೆ ಬರುತ್ತದೆ.
ವಿಶ್ಲೇಷಣೆ: ಇದು ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುವಂತಹ ಒಂದು ಯೋಜನೆ. ಅವಧಿಯ ದೃಷ್ಟಿಯಿಂದಲೂ ದೀರ್ಘ‌ಕಾಲಕ್ಕೆ ಧನ ಸಂಚಯ ಮಾಡುವಂತಹ ಯೋಜನೆ. ಬಡ್ಡಿ ದರವೂ ಉತ್ತಮವಾಗಿದೆ. ಪಿಪಿಎಫ್ ಖಾತೆಗಿಂತಲೂ ಜಾಸ್ತಿ ಬಡ್ಡಿ ನೀಡುವುದು ಇದರ ವಿಶೇಷತೆ. ವಾರ್ಷಿಕ 9.1% ಬಡ್ಡಿ ಇನ್ನಾವ ಸಾಧಾರಣ ಖಾತೆಗಳಲ್ಲೂ ಲಭ್ಯವಿಲ್ಲ (ಸೀನಿಯರ್‌ ಸಿಟಿಜನ್‌ ಖಾತೆಯಲ್ಲಿ ಮಾತ್ರ 9.2% ದೊರಕುತ್ತದೆ). ಈ ನಿಟ್ಟಿನಲ್ಲಿ ಸರಕಾರ ಉತ್ತಮ ಯೋಜನೆಯನ್ನೇ ಹಾಕಿಕೊಂಡಿದೆ. ಆದರೆ ಕರವಿನಾಯಿತಿಯ ಕ್ಷೇತ್ರದಲ್ಲಿ ಈ ಯೋಜನೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಕೇವಲ ಸೆಕ್ಷನ್‌ 80ಸಿ ಅಡಿಯಲ್ಲಿ ಮಾತ್ರ ಕರ ವಿನಾಯಿತಿ ಸೌಲಭ್ಯವನ್ನು ನೀಡಲಾಗಿದೆ- ಅಂದರೆ ವಾರ್ಷಿಕವಾಗಿ ಹೂಡುವ ಮೊತ್ತದಲ್ಲಿ ಮಾತ್ರ ರೂ. 1,50,000 ಮಿತಿಯೊಳಗೆ ಕರವಿನಾಯಿತಿ ದೊರಕುತ್ತದೆ. ಆದರೆ ಇದರ ಮೇಲೆ ಬರುವ ಬಡ್ಡಿಯ ಮೇಲೆ ಕರ ನೀಡಬೇಕಾಗುತ್ತದೆ. ಪಿಪಿಎಫ್ ಮತ್ತು ಇಎಲ್‌ಎಸ್‌ಎಸ್‌ ಸ್ಕೀಮುಗಳನ್ನು ನೋಡಿದರೆ ಅವುಗಳಲ್ಲಿ ಬರುವ ಬಡ್ಡಿಯ ಮೇಲೂ ಕರವಿನಾಯಿತಿ ಇರುತ್ತದೆ. ಕರ ಪಾವತಿ ಮಾಡುವವರಿಗೆ ಈ ನಿಟ್ಟಿನಲ್ಲಿ ಈ ಯೋಜನೆ ಪಿಪಿಎಫ್ ಮತ್ತು ಇಎಲ್‌ಎಸ್‌ಎಸ್‌ ಯೋಜನೆಗಳಿಗಿಂತ ಖಂಡಿತವಾಗಿಯೂ ಕಳಪೆಯಾಗಿ ಕಂಡೀತು. ಆದರೆ ಕರ ಅನ್ವಯವಾಗದವರಿಗೆ ಈ ಸ್ಕೀಮು ಅವುಗಳಿಗಿಂತ ಉತ್ತಮವಾದೀತು.
ಈ ಬಜೆಟ್ಟಿನಲ್ಲಿ ಈ ಸ್ಕೀಮಿನ ಮೇಲೆ ಬಡ್ಡಿ ದರದಲ್ಲೂ ಕರ ವಿನಾಯಿತಿ ನೀಡಬಹುದು ಎಂಬ ಊಹಾಪೋಹ ಚಾಲ್ತಿಯಲ್ಲಿದೆ. ಹಾಗಾಗಲಿ ಎಂದು ಆಶಿಸೋಣ. ಆದರೆ ಅಂತಹ ಗಾಳಿಸುದ್ದಿಗಳು ಸಾಕಾರವಾದ ಬಳಿಕವಷ್ಟೆ ನಾವು ಹೂಡಿಕೆಯ ಬಗ್ಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಪ್ರಚಾರ: ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಆರಂಭಗೊಂಡ ಈ ಯೋಜನೆಯ ಬಗ್ಗೆ ಈಗಿನ್ನೂ ಯಾವುದೇ ಪ್ರಚಾರ ಆರಂಭವಾಗಿಲ್ಲ. ಸ್ಕೀಮು ಅರಂಭಗೊಂಡ ಬಳಿಕ ಸಂಪೂರ್ಣ ಅನುಷ್ಠಾನಕ್ಕೆ ಸಮಯ ತಗಲುತ್ತದೆ. ನಿಮ್ಮ ಭಾರತೀಯ ಅಂಚೆ ಇಲಾಖೆಯ ಜಾಲತಾಣದಲ್ಲಿ ಇದರ ಬಗ್ಗೆ ಉÇÉೇಖವೂ ಇಲ್ಲ. ಹಾಗಾಗಿ ನಿಮ್ಮ ಜಿÇÉೆಯ ಅಂಚೆ ಕಚೇರಿ ಅಥವಾ ಸರಕಾರಿ ಬ್ಯಾಂಕುಗಳ ಶಾಖೆಯಲ್ಲಿ ಈ ಬಗ್ಗೆ ಮಾಹಿತಿ ಇನ್ನೂ ಬಂದಿರಲಾರದು. ತಾಳ್ಮೆ ಇರಲಿ.

ಹೆಣ್ಣು ಮಕ್ಕಳ ಉಜ್ವಲ ಭವಿಷ್ಯದ ಗುರಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ



1
ಹೆಣ್ಣು ಮಕ್ಕಳ ಉಜ್ವಲ ಭವಿಷ್ಯದ ಗುರಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ
* ದಿನೇಶ್ ಎಂ.ಆರ್. ಬೆಂಗಳೂರು

ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ಉಳಿತಾಯಕ್ಕೆ ಹಲವು ಯೋಜನೆಗಳಿವೆ. ಆದರೆ, ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಮತ್ತು ವಿವಾಹಕ್ಕೆ ನಿರ್ದಿಷ್ಟ ಯೋಜನೆಗಳಿಲ್ಲ. ಇದನ್ನು ಮನಗಂಡ ಕೇಂದ್ರ ಸರಕಾರ, ಜನವರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿರುವ ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕೆ ಆಶಾಕಿರಣ. ಎಸ್‌ಎಸ್‌ಐ ಯೋಜನೆಯಲ್ಲಿರುವ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ.
-----

ಹೆಣ್ಣು ಮಗುವಿನ ಶಿಕ್ಷಣ ಮತ್ತು ವಿವಾಹದ ಗುರಿ ಸಾಧನೆಗಾಗಿ ಬ್ಯಾಂಕ್ ಅಥವಾ ಅಂಚೆ ಕಚೇರಿಯ ನಿಶ್ಚಿತ ಠೇವಣಿ ಅಥವಾ ಸಾರ್ವಜನಿಕ ಭವಿಷ್ಯ ನಿಧಿ 'ಪಿಪಿಎಫ್' ಮುಂತಾದ ಸಾಂಪ್ರದಾಯಿಕ ಹೂಡಿಕೆ ಸಾಧನಗಳಲ್ಲಿ ಹಣ ತೊಡಗಿಸಲು ಯೋಚಿಸುತ್ತಿದ್ದೀರಾ? ಕೇಂದ್ರ ಸರಕಾರ ಜನವರಿ 22ರಂದು ಮಾರುಕಟ್ಟೆಗೆ ಪರಿಚಯಿಸಿರುವ 'ಸುಕನ್ಯಾ ಸಮೃದ್ಧಿ ಯೋಜನೆ(ಎಸ್‌ಎಸ್‌ವೈ)' ನಿಮ್ಮ ಭವಿಷ್ಯದ ಚಿಂತನೆಗಳಿಗೆ ಉತ್ತಮ ಪರ್ಯಾಯ ಹೂಡಿಕೆ ಸಾಧನವಾಗಲಿದೆ. ಪ್ರಧಾನ ಮಂತ್ರಿ 'ಬೇಟಿ ಬಚಾವೊ ಬೇಟಿ ಪಡಾವೊ' ಕಾರ್ಯಕ್ರಮದ ಉಪಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಈ ಆಕರ್ಷಕ ಹೂಡಿಕೆ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ಈ ಯೋಜನೆ ತೆರಿಗೆ ವಿನಾಯ್ತಿಗೆ ಒಳಪಡುತ್ತದೆ. ಈ ಯೋಜನೆಗೆ ತೊಡಗಿಸುವ ಹಣವು ತೆರಿಗೆ ಮುಕ್ತ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಸುಕನ್ಯಾ ಹೆಚ್ಚು ಸುಂದರ...
'ಸುಕನ್ಯಾ ಸಮೃದ್ಧಿ ಯೋಜನೆ' ಪಿಪಿಎಫ್‌ಗಿಂತ ಹೆಚ್ಚು ಆಕರ್ಷಕ. ಏಕೆಂದರೆ ಇದಕ್ಕೆ ಸಿಗುವ ಬಡ್ಡಿ ಆದಾಯ ಅಧಿಕ. ಈ ಬಡ್ಡಿ ಆದಾಯವನ್ನು ಸರಕಾರಿ ಬಾಂಡ್‌ಗಳು ನೀಡುವ ಆದಾಯಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಹಾಗಾಗಿ, ಅವು ಸದಾ ಉತ್ತಮ ವರಮಾನವನ್ನೇ ನೀಡುತ್ತವೆ. ಆದರೆ, ಪಿಪಿಎಫ್‌ಗೆ ಸಿಗುವ ಬಡ್ಡಿ ಆದಾಯವು 10 ವರ್ಷಗಳ ಸರಕಾರಿ ಬಾಂಡ್‌ಗಳಿಗಿಂತ 25 ಮೂಲಾಂಕ ಮಾತ್ರ ಹೆಚ್ಚಿದ್ದರೆ, 'ಸುಕನ್ಯಾಸಮೃದ್ಧಿ ಯೋಜನೆ'ಯ ಹೂಡಿಕೆಗೆ 75 ಮೂಲಾಂಕಗಳ ಹೆಚ್ಚಿನ ಬಡ್ಡಿ ಸಿಗುತ್ತದೆ. ಪ್ರಸಕ್ತ ಸಾಲಿನಲ್ಲಿ(2014 ಏಪ್ರಿಲ್ 1ರಿಂದ 2015 ಮಾರ್ಚ್ 31ರ ವರೆಗೆ) ಪಿಪಿಎಫ್‌ಗೆ ಶೇ.8.7 ಬಡ್ಡಿ ಆದಾಯ ಸಿಕ್ಕರೆ, ಎಸ್‌ಎಸ್‌ವೈಗೆ ಶೇ.9.1 ಬಡ್ಡಿ ವರಮಾನ ಸಿಗಲಿದೆ.

ಖಾತೆ ತೆರೆಯಲು ಮಾರ್ಚ್ 31ರ ವರೆಗೆ ಅವಕಾಶ
'ಸುಕನ್ಯಾಸಮೃದ್ಧಿ ಯೋಜನೆ' ಪಿಪಿಎಫ್‌ಗಿಂತ ಹೆಚ್ಚಿನ ವರಮಾನ ನೀಡುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಎಲ್ಲ ಹೆಣ್ಣು ಮಕ್ಕಳಿಗೆ ಲಭ್ಯವಿಲ್ಲ. 10 ವರ್ಷದವರೆಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಪೋಷಕರು ಅಥವಾ ಪಾಲಕರು ಎಸ್‌ಎಸ್‌ವೈ ಖಾತೆ ತೆರೆಯಲು ಅವಕಾಶವಿದೆ. ಆದರೆ ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ಸರಕಾರ ವಯೋಮಿತಿಯಲ್ಲಿ 1 ವರ್ಷ ಸಡಿಲಿಕೆ ನೀಡಿದೆ. 2015 ಡಿಸೆಂಬರ್ 1ರವರೆಗೆ ಅನ್ವಯವಾಗುವಂತೆ 11 ವರ್ಷದವರೆಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಎಸ್‌ಎಸ್‌ವೈ ಖಾತೆ ತೆರೆಯಲು ಮುಕ್ತ ಅವಕಾಶ ನೀಡಲಾಗಿದೆ. 2003 ಡಿಸೆಂಬರ್ 2ಕ್ಕಿಂತ ಮುನ್ನ ಜನಿಸಿದ ಹೆಣ್ಣು ಮಗು ಈ ಯೋಜನೆಗೆ ಅರ್ಹತೆ ಹೊಂದುವುದಿಲ್ಲ. ಹಾಗಾಗಿ, ಸಾರ್ವಜನಿಕರು ಸರಕಾರ ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗುವುದು ಜಾಣತನ. ಪ್ರಸಕ್ತ ಆರ್ಥಿಕ ವರ್ಷ ಮಾರ್ಚ್ 31ರ ವರೆಗೆ ಇರುತ್ತದೆ. ಈ ಅವಧಿಯೊಳಗೆ ಪೋಷಕರು ಮತ್ತು ಪಾಲಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಮುಂದಾಗುವುದು ಸೂಕ್ತ. ಇದರಿಂದ 1 ವರ್ಷದ ಸಂಪೂರ್ಣ ಪ್ರಯೋಜನಗಳು ಮಗುವಿಗೆ ಸಿಗುತ್ತದೆ.

ಖಾತೆ ತೆರೆಯುವುದು ಹೇಗೆ?
ಯಾವುದೇ ಅಂಚೆ ಕಚೇರಿ ಅಥವಾ ಸಾರ್ವಜನಿಕ ರಂಗದ ಬ್ಯಾಂಕ್‌ಗಳ ನಿಯೋಜಿತ ಶಾಖೆಗಳಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಆರ್ಥಿಕ ವರ್ಷದಲ್ಲಿ ಕನಿಷ್ಠ ಹೂಡಿಕೆ 1 ಸಾವಿರ ರೂ. ಹಾಗೂ ಗರಿಷ್ಠ 1.5 ಲಕ್ಷ ರೂ. ಹಣ ತೊಡಗಿಸಬಹುದು. ಖಾತೆ ತೆರೆದ ಬಳಿಕ 14 ವರ್ಷಗಳ ಅವಧಿವರೆಗೆ ಠೇವಣಿ ಹೂಡಿಕೆ ಮಾಡಬಹುದು. ಯಾವುದೇ ಆರ್ಥಿಕ ವರ್ಷದಲ್ಲಿ ಖಾತೆಗೆ ಕನಿಷ್ಠ ಬಾಕಿ ಕಾಪಾಡದಿದ್ದರೆ ಆ ವರ್ಷಕ್ಕೆ 50 ರೂ. ದಂಡ ವಿಧಿಸಲಾಗುತ್ತದೆ. ಯಾವುದೇ ಪೋಷಕ ಅಥವಾ ಪಾಲಕ ತನ್ನ ಎರಡು ಹೆಣ್ಣು ಮಕ್ಕಳಿಗೆ ಸುಕನ್ಯಾ ಸುಮೃದ್ಧಿ ಯೋಜನೆಯ ಖಾತೆ ತೆರೆಯಲು ಅವಕಾಶವಿದೆ. ಆದರೆ ಎರಡೂ ಖಾತೆಗಳ ಸಂಯೋಜಿತ ಹೂಡಿಕೆಯ ಮೊತ್ತ ವರ್ಷದಲ್ಲಿ 1.5 ಲಕ್ಷ ರೂ. ದಾಟಬಾರದು. ಹೆಣ್ಣು ಮಗುವಿಗೆ 21 ವರ್ಷ ತುಂಬಿದಾಗ ಎಸ್‌ಎಸ್‌ವೈ ಖಾತೆಯ ಅವಧಿ ಪಕ್ವ(ಪೂರ್ಣ)ವಾಗುತ್ತದೆ. ಆಕೆಗೆ 18 ವರ್ಷ ತುಂಬಿದಾಗ ಅಥವಾ ವಿವಾಹವಾದ ಬಳಿಕ ಖಾತೆಯಲ್ಲಿ ತೊಡಗಿಸಿರುವ ಹಣದ ಶೇ.50 ಭಾಗವನ್ನು ಹಿಂಪಡೆಯಲು ಅವಕಾಶವಿದೆ.

ಎಸ್‌ಎಸ್‌ವೈ ಏಕೆ ಅರ್ಥಪೂರ್ಣ?
ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ಹೂಡಿಕೆ ಮಾಡುತ್ತಾರೆ ಎಂದರೆ ಅದರಲ್ಲಿ ಒಂದು ನಿರ್ದಿಷ್ಟ ಉದ್ದೇಶ ಅಡಕವಾಗಿರುತ್ತದೆ. ಆ ಉದ್ದೇಶ ಸಾಧನೆಗೆ ಎಸ್‌ಎಸ್‌ವೈ ಪಕ್ಕಾ ಯೋಜನೆಯಾಗಿ ಕಾಣುತ್ತಿದೆ. ಆದರೆ 15 ವರ್ಷಗಳ ಪಿಪಿಎಫ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡುತ್ತಾ ಹೋದರೆ, ದೀರ್ಘಾವಧಿವರೆಗೆ ಕಾಯಬೇಕು. 15 ವರ್ಷಗಳ ತರುವಾಯ ಪಿಪಿಎಫ್ ಹಣ ಸಿಕ್ಕಾಗ ಕೆಲವರು ನಿವೇಶನ ಅಥವಾ ಮನೆ ಖರೀದಿಸಬಹುದು. ಮತ್ತೆ ಕೆಲವರು ಮಗಳ ವಿವಾಹ ನೆರವೇರಿಸಬಹುದು. ಆದರೆ ಈ ಯೋಜನೆ ನಿರ್ದಿಷ್ಟ ಗುರಿ ಸಾಧನೆಗೆ ನೆರವಾಗುವುದಿಲ್ಲ. ಅದೇ ಎಸ್‌ಎಸ್‌ವೈನಲ್ಲಿ ಹಣ ತೊಡಗಿಸಿದರೆ, ಮಗಳ ಉನ್ನತ ಶಿಕ್ಷಣ, ವಿವಾಹ, ಮನೆ ಖರೀದಿ, ಬೆಳ್ಳಿ ಬಂಗಾರದ ಒಡವೆ ಮುಂತಾದ ಅರ್ಥಪೂರ್ಣ ಕಾರ್ಯಗಳಿಗೆ ನೆರವಾಗಿ ಬರುತ್ತದೆ. ಆದರೆ ಕೇಂದ್ರ ಸರಕಾರ, ಈ ಯೋಜನೆಗೆ ಬರುವ ಹಣವನ್ನು ಸಮರ್ಪಕವಾಗಿ ನಿರ್ವಹಿಸಬೇಕಷ್ಟೆ ಎನ್ನುತ್ತಾರೆ ಹಣಕಾಸು ಯೋಜಕರು ಮತ್ತು ವಿಶ್ಲೇಷಕರು.

ಹಣಕಾಸು ತಜ್ಞರ ಸಲಹೆ ಏನು?
ಹೆಣ್ಣು ಮಗುವಿನ ವಯಸ್ಸು 10 ಆದಾಗ ದಂಪತಿ ಎಸ್‌ಎಸ್‌ವೈ ಯೋಜನೆಯ ಖಾತೆಗೆ ಪ್ರತಿ ವರ್ಷ 1.5 ಲಕ್ಷ ರೂ. ತೊಡಗಿಸುತ್ತಾ ಬಂದರೆ 11 ವರ್ಷಗಳಲ್ಲಿ ಹೂಡಿಕೆ ಮೊತ್ತ 28.89 ಲಕ್ಷ ರೂ.ಗೆ ಬೆಳೆಯುತ್ತದೆ. ಆಗ ಮಗುವಿಗೆ 21 ವರ್ಷ ತುಂಬಿರುತ್ತದೆ. ಒಂದು ವೇಳೆ ಮಗುವಿನ ವಯಸ್ಸು 5 ವರ್ಷವಿದ್ದಾಗಲೇ ಈ ಯೋಜನೆಯಲ್ಲಿ ವಾರ್ಷಿಕ 1.5 ಲಕ್ಷ ರೂ. ಹಣ ತೊಡಗಿಸುತ್ತಾ ಬಂದರೆ ಆಕೆಗೆ 19 ವರ್ಷ ತುಂಬರುವ ವೇಳೆಗೆ ಹೂಡಿಕೆಯ ಮೊತ್ತ 42.88 ಲಕ್ಷ ರೂ.ಗೆ ಏರಿಕೆ ಆಗಿರುತ್ತದೆ. ಇದು ಪೋಷಕರ ಪಾಲಿಗೆ ಆಕರ್ಷಕ ಎನಿಸಬಹುದು. ಆದರೆ, 14 ವರ್ಷಗಳ ಬಳಿಕ ಉದಾಹರಣೆಗೆ 2031ರ ಹೊತ್ತಿಗೆ ಹೆಣ್ಣು ಮಗುವಿನ ಶಾಲಾ ಶಿಕ್ಷಣ ವೆಚ್ಚ ದುಬಾರಿಯಾಗಿರುತ್ತದೆ. ಹಾಗಾಗಿ, ಹೂಡಿಕೆ ಮಾಡುವಾಗ ಇರುವ ಬಡ್ಡಿದರ ಮೌಲ್ಯ 14 ವರ್ಷಗಳ ಬಳಿಕ ಕುಸಿದಿರುತ್ತದೆ. ಎಸ್‌ಎಸ್‌ವೈ ಅನ್ನು ಇತರೆ ಹೂಡಿಕೆ ಸಾಧನಗಳೊಂದಿಗೆ ಸಂಯೋಜಿಸಿ, ಬಳಸುವುದು ಜಾಣತನ. ಅಂದರೆ ಮಗಳ ಭವಿಷ್ಯದ ಗುರಿಗಳಿಗೆ ಎಸ್‌ಎಸ್‌ವೈ ಜತೆ ಈಕ್ವಿಟಿ ನಿಧಿಯಂತಹ ಸಾಧನಗಳಲ್ಲೂ ಹೂಡಿಕೆ ಮಾಡಿ, ಎರಡರಿಂದ ಬರುವ ಆದಾಯವನ್ನು ನಿಶ್ಚಿತ ಗುರಿಗೆ ಬಳಸುವ ಗುರಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಹಣಕಾಸು ತಜ್ಞರು.ಹೆಣ್ಣು ಮಕ್ಕಳ ಉಜ್ವಲ ಭವಿಷ್ಯದ ಗುರಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ

ವಿದೇಶಗಳಲ್ಲಿ ಉನ್ನತ ಶಿಕ್ಷಣ ಈಗಲೇ ಜನಸಾಮಾನ್ಯರ ಪಾಲಿಗೆ ದುಬಾರಿ. ಮುಂದಿನ 10 - 15 ವರ್ಷಗಳ ನಂತರ ಅದು ಕೈಗೆಟುಕದ ಸರಕಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ, ಶ್ರೀಸಾಮಾನ್ಯ ಹೂಡಿಕೆದಾರರು ಒಂದೇ ಹೂಡಿಕೆ ಯೋಜನೆಯನ್ನು ಅವಲಂಬಿಸಿದೆ ಅಧಿಕ ವರಮಾನ ಸಿಗುವ ಪರ್ಯಾಯ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂಬುದು ಅವರ ತರ್ಕ.

ಟಾಪ್ 5...
ತೆರಿಗೆ ಉಳಿತಾಯದ ಪ್ರಮುಖ
ಜನಪ್ರಿಯ ಹೂಡಿಕೆ ಯೋಜನೆಗಳು

ಸಾಧನ ಅವಧಿ ಸರಾಸರಿ ಬಡ್ಡಿ ಆದಾಯ

1. ಪಿಪಿಎಫ್ 15 ವರ್ಷ 8.7%
2. ಇಎಲ್‌ಎಸ್‌ಎಸ್ ನಿಧಿ 5 ವರ್ಷ 15.7%
3. ಯುಲಿಪ್ಸ್ 5 ವರ್ಷ 7.2-11.8%
4. ಎನ್‌ಎಸ್‌ಸಿ, ಬ್ಯಾಂಕ್ ಎಫ್‌ಡಿ 5 ವರ್ಷ 8.5-9.75%
5. ವೈಯಕ್ತಿಕ ಪಿಎಫ್ 1 ವರ್ಷ 8.5%

ಬಿ ಸ್ಮಾರ್ಟ್....
ಅವಳಿ ಹೆಣ್ಣು ಮಕ್ಕಳಿದ್ದರೆ 3ನೇ ಮಗುವಿಗೂ ಖಾತೆ


ಸಣ್ಣ ಉಳಿತಾಯ ಯೋಜನೆಯಾಗಿರುವ ಎಸ್‌ಎಸ್‌ವೈನಲ್ಲಿ ಪ್ರತಿ ಹೆಣ್ಣು ಮಗುವಿಗೆ ಒಂದೇ ಖಾತೆ ತೆರೆಯಲು ಮಾತ್ರ ಅವಕಾಶ. ಪ್ರಸಕ್ತ ಸಾಲಿಗೆ ಮಾತ್ರ ಅನ್ವಯವಾಗುವಂತೆ ಮಗು 02 ಡಿಸೆಂಬರ್ 2013ರಂದು ಅಥವಾ ಅದರ ನಂತರ ಜನಿಸಿರಬೇಕು. ಅಂದರೆ ವಯಸ್ಸು 10 ವರ್ಷದೊಳಗಿರಬೇಕು. ಪೋಷಕರಿಗೆ ಅವಳಿ ಹೆಣ್ಣು ಮಕ್ಕಳಿದ್ದರೆ, ಮೂರನೇ ಹೆಣ್ಣು ಮಗುವಿಗೂ ಖಾತೆ ತೆರೆಯಲು ಅವಕಾಶವಿದೆ. ಖಾತೆ ತೆರೆಯುವ ಹೆಣ್ಣು ಮಗುವಿಗೆ ಪಾಸ್ ಬುಕ್ ನೀಡಲಾಗುತ್ತದೆ. ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಜನನ ಪ್ರಮಾಣ ಪತ್ರ, ವಿಳಾಸ, ಗುರುತಿನ ದಾಖಲೆ ಒದಗಿಸುವುದು ಕಡ್ಡಾಯ. ದೇಶಾದ್ಯಂತ ಖಾತೆಯ ವರ್ಗಾವಣೆಗೆ ಅವಕಾಶವಿದೆ.

ಒಳನೋಟ....
ಎಸ್‌ಎಸ್‌ವೈ ಆದಾಯ ವಿಶೇಷ ಏನು?


ದೇಶದ ಹೆಣ್ಣುಮಕ್ಕಳ ಶಿಕ್ಷಣ, ವಿವಾಹ ಮತ್ತಿತರ ಮಹತ್ತರ ಕಾರ್ಯಗಳಿಗೆ ಶ್ರೀಸಾಮಾನ್ಯ ಪೋಷಕರಿಗೆ ಹಣಕಾಸಿನ ತೊಂದರೆ ಎದುರಾಗಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ಪರಿಚಯಿಸಿದ ವಿಶೇಷ ಠೇವಣಿ ಯೋಜನೆಯೇ 'ಸುಕನ್ಯಾ ಸಮೃದ್ಧಿ ಖಾತೆ'. ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆದು ಇಡಲಾಗುವ ಹಣಕ್ಕೆ ನೀಡಲಾಗುವ ಬಡ್ಡಿ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಸರಕಾರ ಪ್ರತಿವರ್ಷ ಬಡ್ಡಿ ಆದಾಯ ಪ್ರಕಟಿಸುತ್ತದೆ. ಈ ವರ್ಷಕ್ಕೆ ಶೇ.9.1 ಬಡ್ಡಿದರ ಪ್ರಕಟವಾಗಿದೆ. ಪ್ರತಿ ವರ್ಷವೂ ಬಡ್ಡಿ ಆದಾಯ ಕೂಡಿಕೆಯಾಗುತ್ತಾ ಹೋಗುತ್ತದೆ. 10 ವರ್ಷ ತುಂಬಿದ ಬಳಿಕ ಹೆಣ್ಣು ಮಗುವೇ ಖಾತೆ ನಿರ್ವಹಿಸಬಹುದು.

ಪ್ರಶ್ನೋತ್ತರ....
ಎಸ್‌ಎಸ್‌ವೈ ಖಾತೆ ಮೆಚ್ಯೂರಿಟಿಯಾದ ನಂತರ ಹಣ ಹಿಂಪಡೆಯದಿದ್ದರೆ ಬಡ್ಡಿ ವರಮಾನ ಸಿಗುತ್ತಾ?

ಹೆಣ್ಣುಮಗುವಿನ ಹೆಸರಿನಲ್ಲಿ ತೆರೆಯುವ ಖಾತೆ 14 ವರ್ಷ ಪೂರ್ಣಗೊಂಡ ಬಳಿಕ ಅಥವಾ ಖಾತೆದಾರಳಿಗೆ 21 ವರ್ಷ ತುಂಬಿದ ಬಳಿಕ ಹೂಡಿಕೆ ಮತ್ತು ಬಡ್ಡಿ ಆದಾಯ ಸೇರಿದ ಒಟ್ಟು ಹಣವನ್ನು ಹಿಂಪಡೆಯದಿದ್ದರೆ, ಆ ಹಣ ಕಾಲಕಾಲಕ್ಕೆ ಬಡ್ಡಿ ಆದಾಯಕ್ಕೆ ಒಳಪಡುತ್ತದೆ. ಯೋಜನೆಗೆ ನಿಗದಿಪಡಿಸುವ ಬಡ್ಡಿ ವರಮಾನ ಸಿಗುತ್ತದೆ. ಠೇವಣಿ ಮತ್ತು ಬಡ್ಡಿ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ.

ತಿಳಿ-ನಲಿ
ಸುಕನ್ಯಾ ಸಮೃದ್ಧಿ ಯೋಜನೆಯ ಸಮಗ್ರ ಮಾಹಿತಿ ಅರಿಯಲು ಸಂಪರ್ಕಿಸಬಹುದಾದ ವೆಬ್‌ಸೈಟ್
www.sukanyasamriddhiaccountyojana.in/

ಅಂಕಿ-ನೋಟ......
337.793 ಶತಕೋಟಿ ಡಾಲರ್

ಮಾರ್ಚ್ 6ರವರೆಗೆ ಅನ್ವಯವಾಗುವಂತೆ ಭಾರತ ಹೊಂದಿರುವ ವಿದೇಶಿ ವಿನಿಮಯ ಸಂಗ್ರಹ
**