Thursday, November 5, 2015
ಚಿನ್ನದ ಬಾಂಡ್; ನ.5ರಿಂದ ಅರ್ಜಿ ಸ್ವೀಕಾರ,26ಕ್ಕೆ ವಿತರಣೆ
ಚಿನ್ನದ ಬಾಂಡ್; ನ.5ರಿಂದ ಅರ್ಜಿ ಸ್ವೀಕಾರ,26ಕ್ಕೆ ವಿತರಣೆ
ಉದಯವಾಣಿ, Oct 31, 2015, 3:45 AM IST
ಹೊಸದಿಲ್ಲಿ: ಚಿನ್ನದ ಮೇಲೆ ಅತಿಯಾದ ವ್ಯಾಮೋಹ ಹೊಂದಿರುವ ಭಾರತೀಯರಿಗೆ ಪರ್ಯಾಯ ಆಯ್ಕೆ ಒದಗಿಸುವ ಮೂಲಕ ಭೌತಿಕ ಚಿನ್ನ ಖರೀದಿ ಮೇಲಿನ ಆಕರ್ಷಣೆ ತಗ್ಗಿಸಲು ಕೇಂದ್ರ ಸರಕಾರ ಕೊನೆಗೂ "ಚಿನ್ನದ ಬಾಂಡ್' ಯೋಜನೆ ಅನುಷ್ಠಾನಗೊಳಿಸಿದೆ.
ನ. 5ರಿಂದ 20ರ ವರೆಗೆ ಚಿನ್ನದ ಬಾಂಡ್‌ಗಾಗಿ ಬ್ಯಾಂಕ್ ಹಾಗೂ ಅಂಚೆ ಕಚೇರಿ ಶಾಖೆಗಳಲ್ಲಿ ನಾಗ ರಿಕರು ಅರ್ಜಿ ಸಲ್ಲಿಸಬಹುದು. ನ. 26ರಂದು ಬಾಂಡ್ ವಿತರಿಸ ಲಾಗುತ್ತದೆ. ಬಾಂಡ್‌ನಲ್ಲಿ ತೊಡಗಿ ಸುವ ಹಣಕ್ಕೆ ಶೇ. 2.75ರಷ್ಟು ಬಡ್ಡಿ ನೀಡಲಾಗುತ್ತದೆ. ಬಡ್ಡಿ ಮೊತ್ತವನ್ನು 6 ತಿಂಗಳಿಗೊಮ್ಮೆ ಪಾವತಿ ಮಾಡ ಲಾಗುತ್ತದೆ. ಬಾಂಡ್ ಹಿಂದಿರುಗಿ ಸುವಾಗ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿರುತ್ತದೋ ಅಷ್ಟು ಹಣ ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಪ್ರಕಟನೆ ತಿಳಿಸಿದೆ.
2 ಗ್ರಾಂನಿಂದ 500 ಗ್ರಾಂ ವರೆಗಿನ ಚಿನ್ನವನ್ನು ಬಾಂಡ್ ಮೂಲಕ ಖರೀ ದಿಸಬಹುದು. ಹಿಂದಿನ ವಾರದ ಸರಾಸರಿ ಚಿನ್ನದ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಬಾಂಡ್ ವಿತರಿಸಲಾಗುತ್ತದೆ. ಎಂಟು ವರ್ಷ ಗಳ ಬಾಂಡ್ ಇದಾಗಿದೆಯಾದರೂ, ಐದನೇ ವರ್ಷದಿಂದ ಬಾಂಡ್ ಮರ ಳಿಸಿ ಹಣ ಪಡೆಯಬಹುದಾಗಿದೆ.
ಬಾಂಡ್ ಮರಳಿಸಿದ ಸಂದರ್ಭ ದಲ್ಲಿ ಅದರ ಹಿಂದಿನ ವಾರದ ಚಿನ್ನದ ಸರಾಸರಿ ಬೆಲೆ ಎಷ್ಟಿರುತ್ತದೆಯೋ ಅಷ್ಟು ಮೊತ್ತವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಉದಾಹರಣೆಗೆ ಚಿನ್ನದ ಬಾಂಡ್ ಖರೀದಿಸಿದಾಗ 10 ಗ್ರಾಂನ ಬೆಲೆ 25 ಸಾವಿರ ರೂ. ಇದ್ದು, 8 ವರ್ಷಗಳ ಬಳಿಕ ಬಾಂಡ್ ಮರಳಿಸಿದಾಗ 50 ಸಾವಿರ ರೂ. ಆಗಿದ್ದರೆ ಅಷ್ಟು ಮೊತ್ತವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅದನ್ನು ಬಳಸಿಕೊಂಡು ಗ್ರಾಹಕರು ಭೌತಿಕ ಚಿನ್ನ ಖರೀದಿಸಬಹುದು.
ಬಾಂಡ್‌ನಲ್ಲಿ ಹೂಡಿಕೆ ಮಾಡಲಾಗುವ ಮೂಲ ಹಣಕ್ಕೆ ಶೇ.2.75ರಷ್ಟು ಬಡ್ಡಿಯನ್ನೂ ನೀಡಲಾಗುತ್ತದೆ. ಈ ಬಡ್ಡಿ ಮೊತ್ತ ತೆರಿಗೆ ವ್ಯಾಪ್ತಿಗೆ ಬರುತ್ತದೆ. ನ.5ರಿಂದ 20ರವರೆಗೆ ಮೊದಲ ಸುತ್ತಿನ ಅರ್ಜಿ ಕರೆಯಲಾಗಿದೆ. ಮತ್ತೂಂದು ಕಂತಿನ ಅರ್ಜಿ ಸ್ವೀಕಾರವನ್ನು ಮುಂದೆ ಪ್ರಕಟಿಸಲಾಗುತ್ತದೆ. ಚಿನ್ನದ ಬಾಂಡ್ ಅನ್ನು ಸಾಲ ಪಡೆಯಲು ಖಾತ್ರಿಯಾಗಿ ಬಳಸಿಕೊಳ್ಳಬಹುದು.
ಏಕೆ ಈ ಯೋಜನೆ?: ಭೌತಿಕ ಚಿನ್ನದ ಮೇಲೆ ಭಾರತೀಯರ ಹೂಡಿಕೆ ಹೆಚ್ಚಾದ್ದರಿಂದ ಚಿನ್ನದ ಆಮದು ಹೆಚ್ಚಳವಾಗಿ ಚಾಲ್ತಿ ಖಾತೆಯಲ್ಲಿ ಭಾರೀ ಕೊರತೆ ಉಂಟಾಗಿತ್ತು. ಇದು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಭೌತಿಕ ಚಿನ್ನ ಖರೀದಿಯಿಂದ ಜನರನ್ನು ವಿಮುಖಗೊಳಿಸಲು ಚಿನ್ನದ ಬಾಂಡ್ ಬಿಡುಗಡೆ ಮಾಡುವುದಾಗಿ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟಿÉ ಘೋಷಿಸಿದ್ದರು.
ಈ ಯೋಜನೆಯನ್ನು ದೀಪಾವಳಿಗೂ ಮುನ್ನವೇ ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ರವಿವಾರ "ಮನ್ ಕೀ ಬಾತ್' ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದರು.
ಲಾಭವೇನು?
ಭೌತಿಕ ಚಿನ್ನ ಖರೀದಿಸಿದರೆ ಅದನ್ನು ಭದ್ರವಾಗಿಡಲು ಬ್ಯಾಂಕಿನ ಲಾಕರ್‌ನಲ್ಲಿಡಬೇಕಾಗುತ್ತದೆ. ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಅದರ ಬದಲು ಬಾಂಡ್ ಖರೀದಿಸಿದರೆ ಬಡ್ಡಿ ಸಿಗುವುದರ ಜತೆಗೆ, ಚಿನ್ನದ ಮೌಲ್ಯವೂ ಬೆಳೆಯುತ್ತದೆ. ಅವಧಿ ಮುಗಿದ ಬಳಿಕ ಬಾಂಡ್ ಮರಳಿಸಿ, ಭೌತಿಕ ಚಿನ್ನವನ್ನೇ ಖರೀದಿಸಬಹುದು.
ಭೌತಿಕ ಚಿನ್ನ ಖರೀದಿಸಿದರೆ ಅದನ್ನು ಭದ್ರವಾಗಿಡಲು ಬ್ಯಾಂಕಿನ ಲಾಕರ್‌ನಲ್ಲಿಡಬೇಕಾಗುತ್ತದೆ. ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಅದರ ಬದಲು ಬಾಂಡ್ ಖರೀದಿಸಿದರೆ ಬಡ್ಡಿ ಸಿಗುವುದರ ಜತೆಗೆ, ಚಿನ್ನದ ಮೌಲ್ಯವೂ ಬೆಳೆಯುತ್ತದೆ. ಅವಧಿ ಮುಗಿದ ಬಳಿಕ ಬಾಂಡ್ ಮರಳಿಸಿ, ಭೌತಿಕ ಚಿನ್ನವನ್ನೇ ಖರೀದಿಸಬಹುದು.
Subscribe to:
Comments (Atom)

